🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ದ್ವಿರುಕ್ತಿ, ಜೋಡುನುಡಿ ಮತ್ತು ನುಡಿಗಟ್ಟುಗಳು

ದ್ವಿರುಕ್ತಿ, ಜೋಡುನುಡಿ ಮತ್ತು ನುಡಿಗಟ್ಟುಗಳು

1. ದ್ವಿರುಕ್ತಿ

ಒಂದು ವಿಶೇಷ ಅರ್ಥವನ್ನು ಅಭಿವ್ಯಕ್ತಿಸುವುದಕ್ಕಾಗಿ ಒಂದು ಪದ ಅಥವಾ ವಾಕ್ಯವನ್ನು ಎರಡೆರಡು ಬಾರಿ ಬಳಸುವುದನ್ನು ದ್ವಿರುಕ್ತಿ ಎನ್ನುತ್ತೇವೆ.

ಹೌದು ಹೌದು ನಿಲ್ಲು ನಿಲ್ಲು ಕಳ್ಳ ಕಳ್ಳ ಅಬ್ಬಬ್ಬಾ ಹತ್ತಿರ ಹತ್ತಿರ ಬೇಡ ಬೇಡ

2. ಜೋಡು ನುಡಿ (ಜೋಡುನುಡಿ)

ದ್ವಿರುಕ್ತಿಗಳಂತೆ ಕಂಡರೂ ಇವುಗಳಲ್ಲಿ ಒಂದು ಪದಕ್ಕೆ ಅರ್ಥವಿರುತ್ತದೆ, ಇನ್ನೊಂದಕ್ಕೆ ಇರುವುದಿಲ್ಲ ಅಥವಾ ಸಮಾನಾರ್ಥಕ/ವಿರುದ್ಧಾರ್ಥಕ ಪದಗಳು ಜೊತೆಯಾಗಿರುತ್ತವೆ.

A. ಅರ್ಥವಿರದ ಉತ್ತರ ಪದಗಳು:

ಬಟ್ಟೆ ಬರೆ, ಕೂಲಿನಾಲಿ, ದೇವರು ದಿಂಡಿರು, ಸಂಧಿ ಗೊಂಧಿ.

B. ಭಿನ್ನ ಭಾಷೆಯ ಸಮಾನಾರ್ಥಕ ಪದಗಳು:

ಕಡೆ ಲಾಸ್ಟ್, ಸಂತೆಬಜಾರ್, ಗೇಟ್ ಬಾಗಿಲು, ಕಾಂಪೌಂಡ್ ಗೋಡೆ, ಹಣ್ಣು ಹಂಪಲು.

C. ವಿರುದ್ಧಾರ್ಥಕ ಪದಗಳು:

ಹಗಲು ರಾತ್ರಿ, ಪಶುಪಕ್ಷಿ, ಮನೆ ಮಠ, ತಂದೆ ತಾಯಿ, ಆಟ ಪಾಠ.

D. ಪ್ರತಿಧ್ವನಿ ಪದಗಳು (ಗಿ-ಕಾರ):

ನಗು ಗಿಗು, ಮಾತು ಗೀತು, ಶಾಲೆ ಗೀಲೆ, ರೊಕ್ಕ ಗಿಕ್ಕ.

3. ನುಡಿಗಟ್ಟುಗಳು (ಪಡೆನುಡಿ)

ವಿಶೇಷವಾದ ಲಾಕ್ಷಣಿಕ ಅರ್ಥವನ್ನು ನೀಡುವ ನುಡಿ ಸಮುದಾಯಗಳು.

ಕೈ ಕೊಡು ಮೋಸಮಾಡು ಅಥವಾ ಸಹಾಯಮಾಡು
ಕಂಬಿ ಕೀಳು ಓಡಿಹೋಗು
ಬೆನ್ನು ತಟ್ಟು ಹುರುಪು ಕೊಡು / ಪ್ರೋತ್ಸಾಹಿಸು
ಕೈ ಚಾಚು ಬೇಡು / ಯಾಚಿಸು
ಮೂಗಿಗೆ ತುಪ್ಪ ಹಚ್ಚು ಆಸೆ ತೋರಿಸಿ ವಂಚಿಸು
ಉಂಡ ಮನೆ ಎಣಿಸು ಉಪಕಾರ ಮಾಡಿದವನಿಗೆ ಅಪಕಾರ ಮಾಡು
ತಿರುಕನ ಕನಸು ನನಸಾಗದ ಇಚ್ಛೆ
ಟೊಂಕ ಕಟ್ಟು ಸಿದ್ಧವಾಗು
ಅಳಿಲು ಸೇವೆ ಅಲ್ಪ ಸೇವೆ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive