⚠️ ಗಮನಿಸಿ (Disclaimer):
ಇಲ್ಲಿ ನೀಡಲಾಗಿರುವ ಗಾದೆ ಮಾತುಗಳು ಕೇವಲ ಭಾಷಾ ಸಾಹಿತ್ಯ, ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ಶೈಕ್ಷಣಿಕ ಉದ್ದೇಶಗಳಿಗಷ್ಟೇ ಸೀಮಿತವಾಗಿವೆ. ಇವು ಶತಮಾನಗಳಿಂದ ಜನಪದರ ಬಾಯಿಂದ ಬಾಯಿಗೆ ಹರಿದು ಬಂದಿರುವ ಲೋಕೋಕ್ತಿಗಳಾಗಿದ್ದು, ಯಾವುದೇ ನಿರ್ದಿಷ್ಟ ವ್ಯಕ್ತಿ, ಧರ್ಮ, ಜಾತಿ, ಲಿಂಗ ಅಥವಾ ವರ್ಗಕ್ಕೆ ಸಂಬಂಧಿಸಿದ್ದಲ್ಲ. ಒಂದು ವೇಳೆ ಇಲ್ಲಿರುವ ಯಾವುದಾದರೂ ಗಾದೆ ಮಾತುಗಳು ಯಾವುದೇ ನಿರ್ದಿಷ್ಟ ವರ್ಗವನ್ನು ಅಥವಾ ವ್ಯಕ್ತಿಯನ್ನು ಸೂಕ್ಷ್ಮವಾಗಿ ಸೂಚಿಸುವಂತಿದ್ದರೆ ಅಥವಾ ಯಾರ ಭಾವನೆಗಾದರೂ ಧಕ್ಕೆ ತರುವಂತಿದ್ದರೆ, ದಯವಿಟ್ಟು ನಮ್ಮ ಗಮನಕ್ಕೆ ತನ್ನಿ; ಅಂತಹ ಗಾದೆಗಳನ್ನು ತಕ್ಷಣವೇ ಈ ಪಟ್ಟಿಯಿಂದ ತೆಗೆದುಹಾಕಲಾಗುವುದು.
ಗಾದೆಗಳ ಗುಡಾಣ
(ಕನ್ನಡ ಜನಪ್ರಿಯ ಗಾದೆಗಳ ಸರಮಾಲೆ)
ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?
ಅಂಗೈಯಲ್ಲಿ ಬೆಣ್ಣೆ ಇಡ್ಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ.
ಅತಿ ಆಸೆ ಗತಿ ಕೇಡು.
ಅತಿಯಾದರೆ ಆಮೃತವೂ ವಿಷವೇ.
ಅತ್ತ ದರಿ, ಇತ್ತ ಪುಲಿ.
ಅತ್ತೆ ಆಸ್ತೀನ ಅಳಿಯ ದಾನ ಮಾಡಿದನಂತೆ.
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.
ಅಲ್ಪ ವಿದ್ಯಾ ಮಹಾಗರ್ವಿ.
ಆತುರಗಾರನಿಗೆ ಬುದ್ದಿ ಮಟ್ಟ.
ಆಪತ್ತಿಗಾದವನೇ ನೆಂಟ.
ಇಬ್ಬರ ಜಗಳ ಮೂರನೆಯವನಿಗೆ ಲಾಭ.
ಉಪ್ಪ ತಿಂದ ಮೇಲೆ ನೀರು ಕುಡಿಯಲೇ ಬೇಕು.
ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ.
ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ.
ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ದಿ.
ಎಲ್ಲರ ಮನೆಯ ದೋಸೆಯೂ ತೂತೆ !
ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ.
ಓದುವಾಗ ಓದು, ಆಡುವಾಗ ಆಡು.
ಕಣ್ಣರಿಯದಿದ್ದರೂ ಕರುಳರಿಯುತ್ತದೆ.
ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ ?
ಕಬ್ಬಿಣ ಕಾದಿರುವಾಗಲೇ ಬಡಿಯಬೇಕು.
ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ.
ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು.
ಕುಣಿಯಲಾರದವಳು ನೆಲ ಡೊಂಕು ಅಂದಳಂತೆ.