🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಅಲಂಕಾರ

ಅಲಂಕಾರಗಳು (Alankara)

ಕಾವ್ಯದ ಸೌಂದರ್ಯವನ್ನು ಹೆಚ್ಚಿಸುವ ಮಾತುಗಳೇ ಅಲಂಕಾರಗಳು

ಮನುಷ್ಯನಿಗೆ ಒಡವೆಗಳು ಹೇಗೆ ಶೋಭೆ ನೀಡುತ್ತವೆಯೋ, ಹಾಗೆಯೇ ಕಾವ್ಯಕ್ಕೆ ಅರ್ಥವೈಚಿತ್ರ್ಯ ಮತ್ತು ಶಬ್ದವೈಚಿತ್ರ್ಯಗಳಿಂದ ಸೊಬಗು ನೀಡುವ ಅಂಶಗಳನ್ನು ಅಲಂಕಾರಗಳು ಎನ್ನುತ್ತಾರೆ.

ಪ್ರಮುಖ ಗ್ರಂಥಗಳು: ಕವಿರಾಜಮಾರ್ಗ (ನೃಪತುಂಗ), ಕಾವ್ಯಾವಲೋಕನ (ನಾಗವರ್ಮ), ಅಪ್ರತಿಮವೀರಚರಿತೆ (ತಿರುಮಲಾರ‍್ಯ).

1. ಶಬ್ದಾಲಂಕಾರಗಳು

ಶಬ್ದ ಅಥವಾ ವರ್ಣಗಳ ಚಮತ್ಕಾರದಿಂದ ಕಾವ್ಯದ ಸೌಂದರ್ಯ ಹೆಚ್ಚಿದರೆ ಅದು ಶಬ್ದಾಲಂಕಾರ.

A. ಅನುಪ್ರಾಸ (Anuprasa)

ವರ್ಣಗಳ ಪುನರಾವರ್ತನೆಯಿಂದ ಸೊಬಗು ತರುವುದು.

  • ವೃತ್ತಾನುಪ್ರಾಸ: ಒಂದು ವ್ಯಂಜನ ಹಲವು ಬಾರಿ ಬರುವುದು.
    ಉದಾ: ಕರಮಿಶದತ್ತ ಕಾಮುದಿಯ ಚಿತ್ತ ಚಕೋರಿಯ...
  • ಛೇಕಾನುಪ್ರಾಸ: ಎರಡು ವ್ಯಂಜನಗಳು ಪುನರಾವರ್ತನೆಯಾಗುವುದು.
    ಉದಾ: ನೀಡಿ ನೀಡಿ ಕೆಟ್ಟರು ನಿಜವಿಲ್ಲದೇ...

B. ಯಮಕ (Yamaka)

ಮೂರು ಅಥವಾ ಅದಕ್ಕಿಂತ ಹೆಚ್ಚು ವ್ಯಂಜನಗಳು ಪದ್ಯದ ಪ್ರತಿ ಚರಣದ ಒಂದೇ ಸನ್ನಿವೇಶದಲ್ಲಿ ಬರುವುದು.

ಬರಹೇಳ್ ನಿಕುಂಭನಂ ಶುಂಭನಂ ಜಂಭನಂ...

2. ಅರ್ಥಾಲಂಕಾರಗಳು

ಅರ್ಥದ ಚಮತ್ಕಾರದಿಂದ ಕಾವ್ಯದ ಆಂತರಿಕ ಸೌಂದರ್ಯವನ್ನು ಹೆಚ್ಚಿಸುವುದು.

A. ಉಪಮಾ ಅಲಂಕಾರ (Upama)

ಎರಡು ವಸ್ತುಗಳ ನಡುವಿನ ಹೋಲಿಕೆಯನ್ನು ವರ್ಣಿಸುವುದು.

ಉದಾಹರಣೆ: ಪೀತಾಂಬರವನ್ನುಟ್ಟ ಶ್ರೀ ಕೃಷ್ಣ ಕುಂದಣದಲ್ಲಿಟ್ಟ ರತ್ನದಂತೆ ಹೊಳೆಯುತ್ತಿದ್ದ.

ಉಪಮೇಯ (ಹೋಲಿಸುವ ವಸ್ತು)ಶ್ರೀ ಕೃಷ್ಣ
ಉಪಮಾನ (ಹೋಲಿಕೆಗೆ ಬಳಸಿದ ವಸ್ತು)ರತ್ನ
ಉಪಮವಾಚಕಅಂತೆ
ಸಮಾನ ಧರ್ಮಹೊಳೆಯುವುದು

ವಿಧಗಳು: 1. ಪೂರ್ಣೋಪಮೆ (4 ಅಂಶಗಳೂ ಇರುವವು) 2. ಲುಪ್ತೋಪಮೆ (ಅಂಶಗಳು ಲೋಪವಾಗಿರುವವು)

B. ರೂಪಕ ಅಲಂಕಾರ (Rupaka)

ಉಪಮಾನ ಮತ್ತು ಉಪಮೇಯಗಳ ನಡುವೆ ಭೇದವಿಲ್ಲದೆ ಎರಡೂ ಒಂದೇ ಎಂದು ವರ್ಣಿಸುವುದು.

"ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಸವೈಯ್ಯಾ"

C. ದೃಷ್ಟಾಂತ ಅಲಂಕಾರ (Drishtanta)

ಎರಡು ಬೇರೆ ಬೇರೆ ವಾಕ್ಯಗಳು ಬಿಂಬ-ಪ್ರತಿಬಿಂಬದಂತೆ ಇರುವುದು.

ಉದಾ: "ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ"

D. ಶ್ಲೇಷಾಲಂಕಾರ (Shlesha)

ಒಂದೇ ಶಬ್ದದಲ್ಲಿ ನಾನಾ ಅರ್ಥಗಳು ಬರುವಂತೆ ವರ್ಣಿಸುವುದು.

ಉದಾ: ಶ್ರೀಯುವತಿ ಪ್ರಿಯಂ ಬಲವಿತಂ ಬಲಿದರ್ಪ ಹರಂ. (ವಿಷ್ಣು ಮತ್ತು ರಾಜ ಇಬ್ಬರಿಗೂ ಅನ್ವಯ)

E. ಉತ್ಪ್ರೇಕ್ಷಾಲಂಕಾರ (Utpreksha)

ಒಂದು ವಸ್ತುವನ್ನು ಮತ್ತೊಂದು ವಸ್ತುವಿನಂತೆ ಕವಿಯು ಕಲ್ಪಿಸಿ ವರ್ಣಿಸುವುದು.

"ಬೆಟ್ಟದ ಅರಿಗಿಳಿಗಿಂತ ನಿನ್ನ ನುಡಿ ಇಂಪು"
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive