ಪ್ರಶ್ನೆ ಪತ್ರಿಕೆಗಳನ್ನು ಬಳಸುವ ವಿಧಾನ
📄 ಪ್ರಶ್ನೆ ಪತ್ರಿಕೆಯನ್ನು ಆಯ್ಕೆ ಮಾಡಿ
ಮೊದಲು ನಿಮಗೆ ಬೇಕಾದ ಪ್ರಶ್ನೆ ಪತ್ರಿಕೆಯ ಮೇಲೆ ಕ್ಲಿಕ್ ಮಾಡಿ. ಆಯ್ಕೆ ಮಾಡಿದ ಪ್ರಶ್ನೆ ಪತ್ರಿಕೆ ನಿಮ್ಮ ಪರದೆಯ ಮೇಲೆ ತೆರೆಯುತ್ತದೆ.
🏫 ಶಾಲೆಯ ಹೆಸರನ್ನು ನಮೂದಿಸಿ
ಪ್ರಶ್ನೆ ಪತ್ರಿಕೆ ತೆರೆದ ನಂತರ ಮೇಲ್ಭಾಗದಲ್ಲಿ ನಿಮ್ಮ ಶಾಲೆಯ ಹೆಸರನ್ನು ಟೈಪ್ ಮಾಡಿ.
✍️ ಉತ್ತರ ಬರೆಯುವ ಸ್ಥಳ
ಉತ್ತರ ಬರೆಯಲು ಬೇಕಾದ ಸ್ಥಳವು Default ಆಗಿ ಆಯ್ಕೆಗೊಂಡಿರುತ್ತದೆ.
🧠 ಪ್ರಶ್ನೆಗಳನ್ನು ಬದಲಾಯಿಸಿ
ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರತಿಯೊಂದು ಪ್ರಶ್ನೆಯ ಮೇಲೂ ಕ್ಲಿಕ್ ಮಾಡುವ ಮೂಲಕ ಪ್ರಶ್ನೆಯನ್ನು ನಿಮ್ಮ ವಿದ್ಯಾರ್ಥಿಗಳ ಮಾನಸಿಕ ಮಟ್ಟಕ್ಕೆ ಅನುಗುಣವಾಗಿ ಬದಲಾಯಿಸಿಕೊಳ್ಳಬಹುದು.
🎓 ತರಗತಿಯನ್ನು ಆಯ್ಕೆ ಮಾಡಿ
ಮೊದಲು ನಿಮಗೆ ಬೇಕಾದ ತರಗತಿಯನ್ನು ಆಯ್ಕೆ ಮಾಡಿಕೊಳ್ಳಿ. ಆಯ್ಕೆ ಮಾಡಿದ ತರಗತಿಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳು ಲಭ್ಯವಾಗುತ್ತವೆ.
📚 ವಿಷಯವನ್ನು ಆಯ್ಕೆ ಮಾಡಿ
ತರಗತಿಯನ್ನು ಆಯ್ಕೆ ಮಾಡಿದ ನಂತರ ನಿಮಗೆ ಬೇಕಾದ ವಿಷಯವನ್ನು Select ಮಾಡಿ.
🚀 ಪ್ರಶ್ನೆ ಪತ್ರಿಕೆ ಆಯ್ಕೆ ಮಾಡುವ ಸರಳ ವಿಧಾನ
ಪ್ರಶ್ನೆ ಪತ್ರಿಕೆಯನ್ನು ನೇರವಾಗಿ ಬಳಸುವುದರ ಜೊತೆಗೆ, ಶಾಲೆಯ ಹೆಸರು, ಉತ್ತರ ಬರೆಯುವ ಸ್ಥಳ ಹಾಗೂ ಪ್ರಶ್ನೆಗಳ ಮಟ್ಟವನ್ನು ನಿಮ್ಮ ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಬದಲಾಯಿಸಿಕೊಂಡು ಬಳಸಬಹುದು.
