🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ನಿರಂತರ ಆಪ್ ಮೂಲಕ ಮಕ್ಕಳಿಗೂ ಆನ್ ಲೈನ್ ಹಾಜರಾತಿ .
🎓 ಕಸ್ತೂರಬಾ ಶಾಲೆಗೆ ಕೌಶಲದ ಬಲ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಬಿಸಿಯೂಟ: ತೊಗರಿ ಬೇಳೆ ಖರೀದಿಗೆ ಅನುಮತಿ.
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಸಮಾಸ ಎಂದರೇನು..?

ಸಮಾಸ ಪ್ರಕರಣ (Samasa)

ಎರಡು ಅಥವಾ ಹಲವು ಪದಗಳು ಅರ್ಥಕ್ಕನುಗುಣವಾಗಿ ಸೇರಿ ಒಂದು ಶಬ್ದವಾಗುವುದೇ ಸಮಾಸ.

ಮೂಲ ಪರಿಕಲ್ಪನೆಗಳು:

  • ವಿಗ್ರಹವಾಕ್ಯ: ಸಮಾಸದ ಅರ್ಥವನ್ನು ಬಿಡಿಸಿ ಹೇಳುವ ವಾಕ್ಯ.
    ಉದಾ: ಹಿರಿದು + ಜೇನು = ಹೆಜ್ಜೇನು
  • ಪೂರ್ವಪದ: ಸಮಾಸದಲ್ಲಿ ಬರುವ ಮೊದಲನೆಯ ಪದ.
  • ಉತ್ತರಪದ: ಸಮಾಸದಲ್ಲಿ ಬರುವ ಎರಡನೆಯ ಪದ.

ಸಮಾಸದ 8 ವಿಧಗಳು

1. ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿರುವ ಸಮಾಸ.

ಬೆಟ್ಟದ + ತಾವರೆ = ಬೆಟ್ಟದಾವರೆ ತಲೆಯಲ್ಲಿ + ನೋವು = ತಲೆನೋವು

ಇತರ ಉದಾ: ಅರಮನೆ, ಜಲರಾಶಿ, ಕೈತಪ್ಪು.

2. ಕರ್ಮಧಾರೆಯ ಸಮಾಸ

ಪೂರ್ವೋತ್ತರ ಪದಗಳು ವಿಶೇಷಣ-ವಿಶೇಷ್ಯ ಸಂಬಂಧದಿಂದ ಕೂಡಿರುವ ಸಮಾಸ.

ಹಿರಿದು + ಜೇನು = ಹೆಜ್ಜೇನು ಹೊಸದು + ಕನ್ನಡ = ಹೊಸಗನ್ನಡ

ಇತರ ಉದಾ: ಕೆಂದುಟಿ, ಚಿಕ್ಕಮಗು, ಸಿಡಿಮದ್ದು.

3. ದ್ವಿಗು ಸಮಾಸ

ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದ ನಾಮಪದದೊಡನೆ ಸೇರಿ ಆಗುವ ಸಮಾಸ.

ಎರಡು + ಬಗೆ = ಇಬ್ಬಗೆ ನವ (ಒಂಬತ್ತು) + ರಾತ್ರಿ = ನವರಾತ್ರಿ

ಇತರ ಉದಾ: ಸಪ್ತಸ್ವರ, ನಾಲ್ವಡಿ, ಮುಮ್ಮಡಿ.

4. ಅಂಶಿ ಸಮಾಸ

ಪದಗಳು ಅಂಶ-ಅಂಶಿ (ಭಾಗ ಮತ್ತು ಪೂರ್ಣ) ಭಾವದಿಂದ ಸೇರಿ ಪೂರ್ವಪದದ ಅರ್ಥ ಪ್ರಧಾನವಾಗಿರುವ ಸಮಾಸ.

ಬೆರಳಿನ + ತುದಿ = ತುದಿಬೆರಳು ಕಾಲಿನ + ಮುಂದು = ಮುಂಗಾಲು

ಇತರ ಉದಾ: ಹಿಂದಲೆ, ಮಧ್ಯರಾತ್ರಿ, ಅಂಗೈ.

5. ದ್ವಂದ್ವ ಸಮಾಸ

ಸೇರಿರುವ ಎಲ್ಲ ಪದಗಳ ಅರ್ಥಗಳೂ ಪ್ರಧಾನವಾಗಿರುವ ಸಮಾಸ.

ಕೆರೆಯು + ಕಟ್ಟೆಯು + ಬಾವಿಯು = ಕೆರೆಕಟ್ಟೆಬಾವಿಗಳು ಅಣ್ಣನು + ತಮ್ಮನು = ಅಣ್ಣತಮ್ಮಂದಿರು

ಇತರ ಉದಾ: ಮಳೆಬೆಳೆ, ತನುಮನಗಳು, ಕೈಕಾಲು.

6. ಬಹುವ್ರೀಹಿ ಸಮಾಸ

ಸಮಾಸವಾದಾಗ ಅನ್ಯಪದದ (ಬೇರೊಂದು ಪದದ) ಅರ್ಥವು ಪ್ರಧಾನವಾಗಿರುವ ಸಮಾಸ.

ಮೂರು + ಕಣ್ಣು ಉಳ್ಳವನು ಯಾರೋ ಅವನು = ಮುಕ್ಕಣ್ಣ (ಶಿವ) ಚಕ್ರವು ಪಾಣಿಯಲ್ಲಿ (ಕೈಯಲ್ಲಿ) ಯಾರಿಗೆ ಇದೆಯೋ ಅವನು = ಚಕ್ರಪಾಣಿ (ವಿಷ್ಣು)

7. ಕ್ರಿಯಾ ಸಮಾಸ

ಪೂರ್ವ ಪದವು ದ್ವಿತೀಯ ವಿಭಕ್ತಿಯಲ್ಲಿದ್ದು, ಉತ್ತರಪದವು ಕ್ರಿಯಾಪದವಾಗಿರುವ ಸಮಾಸ.

ಕಣ್ಣನ್ನು + ತೆರೆ = ಕಣ್ದೆರೆ ಕೈಯನ್ನು + ಮುಗಿ = ಕೈಮುಗಿ

ಇತರ ಉದಾ: ವಿಷಕಾರು, ಹಣ್ಣುತಿನ್ನು, ಕಂಗೆಡು.

8. ಗಮಕ ಸಮಾಸ

ಪೂರ್ವಪದವು ಸರ್ವನಾಮ, ಕೃದಂತ ಅಥವಾ ಗುಣವಾಚಕವಾಗಿದ್ದು ಉತ್ತರಪದದ ನಾಮಪದದೊಡನೆ ಸೇರುವ ಸಮಾಸ.

ಅವನು + ಹುಡುಗ = ಆ ಹುಡುಗ (ಸರ್ವನಾಮ) ಮಾಡಿದುದು + ಅಡುಗೆ = ಮಾಡಿದಡುಗೆ (ಕೃದಂತ) ಹಳೆಯದು + ಕನ್ನಡ = ಹಳೆಗನ್ನಡ (ಗುಣವಾಚಕ)
ನೆನಪಿಡಿ: ಅಚ್ಚಗನ್ನಡ ಪದಕ್ಕೂ ಸಂಸ್ಕೃತ ಪದಕ್ಕೂ ಸಮಾಸ ಮಾಡಿದರೆ ಅದನ್ನು "ಅರಿ ಸಮಾಸ" ಎನ್ನಲಾಗುತ್ತದೆ. ಇದು ವ್ಯಾಕರಣ ದೋಷವೆಂದು ಪರಿಗಣಿಸಲಾಗುತ್ತದೆ (ಕೆಲವು ಅಪವಾದಗಳನ್ನು ಹೊರತುಪಡಿಸಿ).
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive