🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಮೌಲ್ಯಾಂಕನ ವೇಳಾಪಟ್ಟಿ (1 ರಿಂದ 9ನೇ ತರಗತಿ) ​
📚 ​FA-1: ದಿನಾಂಕ 28-07-2026 ರಿಂದ 30-07-2026 ​
📚 ​​FA-2: ದಿನಾಂಕ 27-08-2026 ರಿಂದ 31-08-2026 ​
📚​ SA-1: ದಿನಾಂಕ 23-09-2026 ರಿಂದ 30-09-2026 ​
📚 ​​FA-3: ದಿನಾಂಕ 17-12-2026 ರಿಂದ 19-12-2026 ​
📚 ​FA-4: ದಿನಾಂಕ 08-02-2027 ರಿಂದ 10-02-2027 ​
📚 ​​SA-2: ದಿನಾಂಕ 15-03-2027 ರಿಂದ 20-03-2027 ​
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Friday, June 12, 2026

ಮಕ್ಕಳ ಶಿಶು ಗೀತೆಗಳು

🍯 ಅಚ್ಚಚ್ಚೋ... ಬೆಲ್ಲದಚ್ಚೋ 🍯
ಅಚ್ಚಚ್ಚೋ.... ಬೆಲ್ಲದಚ್ಚೋ

ಅಲ್ಲಿ ನೋಡು... ಇಲ್ಲಿ ನೋಡು
ಕೆಂಪತ್ತಿ ಮರದಲಿ ಗುಂಪು ನೋಡು

ಯಾವ ಗುಂಪು; ಕಾಗೆ ಗುಂಪು
ಯಾವ ಕಾಗೆ; ಕಪ್ಪು ಕಾಗೆ
ಯಾವ ಕಪ್ಪು; ಇದ್ದಿಲು ಕಪ್ಪು
ಯಾವ ಇದ್ದಿಲು; ಸೌದೆ ಇದ್ದಿಲು
ಯಾವ ಸೌದೆ; ಕಾಡು ಸೌದೆ
ಯಾವ ಕಾಡು; ಸುಡಗಾಡು
ಯಾವ ಸುಡು; ರೊಟ್ಟಿ ಸುಡು
ಯಾವ ರೊಟ್ಟಿ; ತಿನ್ನೋ ರೊಟ್ಟಿ
ಯಾವ ತಿನ್ನ; ಏಟು ತಿನ್ನಾ
ಯಾವ ಏಟು; ದೊಣ್ಣೆ ಏಟು..
ಯಾವ ದೊಣ್ಣೆ; ದಪ್ಪ ದೊಣ್ಣೆ
ಯಾವ ದಪ್ಪ; ಹೊಟ್ಟೆ ದಪ್ಪ
ಯಾವ ಹೊಟ್ಟೆ; ನಿನ್ನ ಹೊಟ್ಟೆ...
🎉 ನಿನ್ನ ಹೊಟ್ಟೆ.. 🎉
🌐 Published by: SCHOOL RESOURCE CENTER
👋 ಕೈ ಕೈ ಎಲ್ಲಿಟ್ಟಿ? 👋
ಕೈ ಕೈ ಎಲ್ಲಿಟ್ಟಿ?
ಬಾಗಲಾಗ ಇಟ್ಟೆ

ಬಾಗಲೇನ ಕೊಟ್ತು?
ಕಸಬರಿಗಿ ಕೊಟ್ತು

ಕಸಬರಗಿಲೆ ಏನ ಮಾಡ್ದಿ?
ಕಸಾ ಬಳದೆ

ಕಸಾ ಏನು ಮಾಡ್ದಿ?
ತಿಪ್ಪಿಗೆ ಚಲ್ದೆ

ತಿಪ್ಪಿ ಏನು ಕೊಟ್ತು?
ಗೊಬ್ಬರ ಕೊಟ್ತು

ಗೊಬ್ಬರ ಏನ ಮಾಡ್ದಿ?
ಹೊಲಕ್ಕ ಹಾಕ್ದೆ

ಹೊಲ ಏನು ಕೊಟ್ತು?
ಜ್ವಾಳ ಕೊಟ್ತು

ಜ್ವಾಳ ಏನು ಮಾಡ್ದಿ?
ರೊಟ್ಟಿ ಮಾಡ್ದೆ

ರೊಟ್ಟಿ ಏನು ಮಾಡ್ದಿ?
ಗಂಡಗ ಕೊಟ್ಟೆ..

🎉 ಹೊಹೊಹೊಹೊ...!! 🎉
🌐 Published by: SCHOOL RESOURCE CENTER
🎶 ಪಟ ಪಟ ಪಾರಿ 🎶
ಪಟ ಪಟ ಪಾರಿ

ಪಾರಿ ಗಂಡ ಪರೂತ್ ಕ ಹೋದ

ಏನ್ ತಂದ?
ಕೋಳಿ ತಂದ

ಏನ್ ಮಾಡ್ದ...
ಕೊಯ್ಕೊಂಡ್ ತಿಂದ!
🌐 Published by: SCHOOL RESOURCE CENTER
🐦 ಕಾಗಿ ಕಾಗಿ.. ಕವ್ವ 🐦
ಕಾಗಿ ಕಾಗಿ.. ಕವ್ವ

ಯಾರ ಬಂದಾರವ್ವ

ಮಾಮಾ ಬಂದಾನವ್ವ

ಏನ ತಂದಾನವ್ವ

ಹಂಡೆದಂಥ *****

ಬಿಟ್ಕೊಂಡ್ ಹಂಗೇ ಬಂದಾನವ್ವ!
🌐 Published by: SCHOOL RESOURCE CENTER
🥭👨‍🦳 ಮಾಮ ಮಾಮ ಮಾತಾಡು 👨‍🦳🥭
ಮಾಮ ಮಾಮ ಮಾತಾಡು...

ಮಾವಿನ ಗಿಡಕ್ಕ ಜೋತಾಡು...

ಮಾವಿನ ಗಂಟಿ ಮುರೀತ್...

ಮಾಮನ ಪಂಚೆ ಹರೀತ್!
🌐 Published by: SCHOOL RESOURCE CENTER
🐘 ಆನಿ ಬಂತೊಂದು ಆನಿ 🐘
ಆನಿ ಬಂತೊಂದು ಆನಿ,
ಯಾವೂರು ಆನಿ,
ಬಿಜಾಪೂರ ಆನಿ,

ಇಲ್ಲಿಗ್ಯಾಕ ಬಂತು,
ಹಾದಿ ತಪ್ಪಿ ಬಂತು

ಹಾದಿಗೊಂದು ದುಡ್ಡು,
ಬೀದಿಗೊಂದು ದುಡ್ಡು

ಅದೇ ದುಡ್ಡ ಕೊಟ್ಟು,
ಸೇರ ಕೊಬ್ರಿ ತಂದು

ಲಟಲಟ ಮುರದು
ಹುಡುಗರ ಕೈಯಾಗ ಕೊಟ್ಟು

ಆನಿ ಓಡೋಡೋಡ ಹೋಯ್ತು!
🌐 Published by: SCHOOL RESOURCE CENTER
🐶 ನಾಯಿಮರಿ 🐶
ನಾಯಿಮರಿ ನಾಯಿಮರಿ ತಿಂಡಿ ಬೇಕೆ
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು

ನಾಯಿಮರಿ ನಿನಗೆ ತಿಂಡಿ ಏಕೆ ಬೇಕು
ತಿಂದು ಗಟ್ಟಿಯಾಗಿ ಮನೆಯ ಕಾಯಬೇಕು

ನಾಯಿಮರಿ ಕಳ್ಳ ಬಂದರೇನು ಮಾಡುವೆ
ಲೊಳ್ ಲೊಳ್ ಎಂದು ಕೂಗಿ ಪಾಡುವೆ

ಜಾಣಮರಿ ತಾಳು ಹೋಗಿ ತಿಂಡಿ ತರುವೆನು
ತಾ ನಿನ್ನ ಮನೆಯ ನಾನು ಕಾಯುತಿರುವೆನು
🌐 Published by: SCHOOL RESOURCE CENTER
🐰 ಮೊಲದ ಮರಿ 🐰
ಮೊಲದ ಮರಿ ಮೊಲದ ಮರಿ
ಆಡು ಬಾರೆ

ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ

ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ

ಗಿಡ್ಡ ಬಾಲ ದೊಡ್ಡ ಕಿವಿಯು
ನಿನಗೆ ಚೆಂದ
ಎದ್ದು ಎನ್ನ ಬಳಿಗೆ ಬಂದು
ಆಡೋ ಕಂದ

ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೆ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೆ
✍️ ಕವಿ : ಕೆಮ್ತೂರು ದೊಡ್ಡಣ್ಣ ಶೆಟ್ಟಿ
🌐 Published by: SCHOOL RESOURCE CENTER
🚂 ಚುಕು ಬುಕು ರೈಲುಗಾಡಿ 🚂
ಚುಕು ಬುಕು ಚುಕು ಬುಕು ರೈಲುಗಾಡಿ!
ಬನ್ನಿರಿ ಹತ್ತಿರಿ ಸವಾರಿ ಮಾಡಿ॥

ಬೆಂಗಳೂರಿಗೆ ಹೋಗೋಣ
ವಿಧಾನಸೌಧ ನೋಡೋಣ॥

ಮೈಸೂರಿಗೆ ಹೋಗೋಣ
ಅರಮನೆಯನ್ನು ನೋಡೋಣ॥

ಧಾರವಾಡಕ್ಕೆ ಹೋಗೋಣ!
ಪೇಡಾವನ್ನು ಸವಿಯೋಣ॥

ವಿಜಯಪುರಕ್ಕೆ ಹೋಗೋಣ!
ಗೋಳಗುಮ್ಮಟ ನೋಡೋಣ॥

ಕೊಡಗಿಗೆ ನಾವು ಹೋಗೋಣ!
ಚಂದದ ಕಿತ್ತಳೆ ಸವಿಯೋಣ॥

ಚಿಕ್ಕಮಗಳೂರಿಗೆ ಹೋಗೋಣ
ರುಚಿ ರುಚಿ ಕಾಫಿ ಸವಿಯೋಣ॥

ಮಂಗಳೂರಿಗೆ ಹೋಗೋಣ
ಅಂದದ ಬಂದರು ನೋಡೋಣ॥

ಚಿತ್ರದುರ್ಗಕ್ಕೆ ಹೋಗೋಣ!
ಕೋಟೆಯ ಬಗ್ಗೆ ತಿಳಿಯೋಣ॥
🌐 Published by: SCHOOL RESOURCE CENTER
🚂 ಚಕು ಬುಕು ಚುಕುಬುಕು ರೈಲು ಬಂತು 🚂
ಚಕು ಬುಕು ಚುಕುಬುಕು ರೈಲು ಬಂತು
ಹೊಳೆಯ ದಡದಲ್ಲಿ ಆನೆಯ ಹಿಂಡು

॥ ಚಕು ಬುಕು ಚುಕುಬುಕು ರೈಲು ಬಂತು ॥

ಓಡುವ ಗಿಡ ಮರ ನೋಡೋಣ
ಮಾವನ ಊರಿಗೆ ಹೋಗೋಣ

॥ ಚುಕುಬುಕು ಚುಕುಬುಕು ರೈಲು ಬಂತು ॥

ನಮ್ಮ ಮಾವ ಬಲು ಜೋರು
ಕೊಡುವನು ಒಂದು ಸೈಕಲ್ಲು

ಸೈಕಲ್ ಸವಾರಿ ಮಾಡೋಣ
ಮಾವನ ಊರಿಗೆ ಹೋಗೋಣ

॥ ಚುಕುಬುಕು ರೈಲು ಬಂತು ॥

ನಮ್ಮ ಅತ್ತೆ ಬಲು ಜಾಣೆ
ದಿನಾಲು ಚಪಾತಿ ಸಿಕರಣೆ

ಚಪಾತಿ ಸಿಕರಣೆ ತಿನ್ನೋಣ
ಮಾವನ ಊರಿಗೆ ಹೋಗೋಣ

॥ ಚಿಕ್ ಬುಕ್ಕು ಚುಕ್ಕುಬುಕ್ಕು ರೈಲು ಬಂತು ॥
🌐 Published by: SCHOOL RESOURCE CENTER
💧 ನೀರಿಗೆ ಹೊರಟೆನವ್ವ ತಂಗಿ 💧
ನೀರಿಗೆ ಹೊರಟೆನವ್ವ ತಂಗಿ
ನೀರಿಗೆ ಹೊರಟಿನಾ
ಬಾಗಿ ಬಾಗಿ ಸೇದಿ ಸೇದಿ
ಸೋತು ಹೋದೆ ನಾ ॥ ಪ ॥

ತಾಯವ್ವ ಕೊಟ್ಟ ತಾಮ್ರದ ಬಿಂದಿಗೆ
ಬಗಲಲಿ ಹಿಡಿದೆನಾ
ಅಪ್ಪ ಹೊಸೆದ ಹೊಸ ಹಗ್ಗ
ಬಲಗೈಲಿ ಹಿಡಿದೆನಾ ॥೧॥

ಗಟ್ಟಿಯಾಗಿ ಹಗ್ಗವ ಕಟ್ಟಿ
ಬಿಂದಿಗೆ ಬಿಟ್ಟೇನಾ
ಶಕ್ತಿ ಎಲ್ಲಾ ಒಟ್ಟುಗೂಡಿಸಿ
ಜಗ್ಗೇ ಜಗ್ಗೇ ನಾ ॥೨॥

ನೀರನು ಕಾಯಿಸಿ ಸ್ನಾನವ ಮಾಡಿ
ಮಡಿಯನು ಉಟ್ಟೇನಾ
ತಂದೆ ತಾಯಿ ದೇವರು ಎಂದು
ಪಾದಕೆ ಬಿದ್ದೇನಾ ॥೩॥
🌐 Published by: SCHOOL RESOURCE CENTER
👩‍👧 ಅಮ್ಮಾ ನಾನೇ ಬಹಳ ಎತ್ತರ! 👩‍👧
ಅಮ್ಮಾ ನಾನೇ ಬಹಳ ಎತ್ತರ!
ತಮ್ಮನ ಹಿಡಿದು ನಡೆಸುವೆನು/
ಗುಮ್ಮಬಂದರು ಹೆದರುವುದಿಲ್ಲ
ಕಮ್ಮಿ ಮಾತುಗಳಾಡುವೆನು!//

ಕಡ್ಡಿಗಳನ್ನು ಎಣಿಸಿ, ಎಣಿಸಿ
ದುಡ್ಡಿನ ಆಟವ ಆಡುವೆನು/
ಅಡ್ಡಿಪಡಿಸದೆ ನಿನ್ನಯ ಕೆಲಸಕೆ
ಲಡ್ಡನು ತಿಂದು ಮಲಗುವೆನು!//

ಜೇಡಿಮಣ್ಣಲಿ ಗಣಪನ ಮಾಡಿ
ರಾಡಿ ನೀರನು ಚೆಲ್ಲುವೆನು!/
ಆಡಲು ಬರುವ ಸ್ನೇಹಿತರನ್ನು
ಹಾಡನು ಹಾಡಿ ನಗಿಸುವೆನು//

ಜೋಡಿ, ಜೋಡಿ ಸೊನ್ನೆಯನು
ಗೋಡೆ ಮೇಲೆ ಬರೆಯುವೆನು!/
ಬೇಡದೆ ತಿನಿಸಲು ಊಟವನು
ನೋಡುತ ಬೀದಿಯ ತಿನ್ನುವೆನು//

ಮುದ್ದಿಸು ನಿನ್ನಯ ಮಡಿಲಲ್ಲಿ
ಸದ್ದನು ಮಾಡದೆ ಮಲಗುವೆನು/
ನಿದ್ದೆಯ ಮಾಡಿ ರಾತ್ರಿಯಿಡಿ
ಎದ್ದು ಶಾಲೆಗೆ ಹೊರಡುವೆನು//
🌐 Published by: SCHOOL RESOURCE CENTER
💛❤️ ನಮ್ಮ ಕನ್ನಡ ನಾಡು 💛❤️
ನಮ್ಮ ನಾಡಿದು ನಮ್ಮದು
ನಮ್ಮ ಕನ್ನಡ ನಾಡಿದು
ನೆಮ್ಮದಿಯ ತವರೂರಿದು
ಕಂಗು ಬೆಳೆಯುವ ನಾಡಿದು
ತೆಂಗು ಬೆಳೆಯುವ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು

ಅರಳು ಮಲ್ಲಿಗೆ ನಾಡಿದು
ಕೆಂಡ ಸಂಪಿಗೆ ನಾಡಿದು
ಕೋಗಿಲೆಯ ತವರೂರಿದು
ಭಾರಿ ಸೊಬಗಿನ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು

ಭತ್ತ ಬೆಳೆಯುವ ನಾಡಿದು
ಮುತ್ತು ಬೆಳೆಯುವ ನಾಡಿದು
ಹೊನ್ನು ಬೆಳೆಯುವ ನಾಡಿದು
ಅನ್ನ ನೀಡುವ ನಾಡಿದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು

ಹಲವು ಕವಿಗಳ ಬೀಡಿದು
ವೀರ ಶೂರರ ನಾಡಿದು
ನಾವು ಹುಟ್ಟಿದ ನಾಡಿದು
ತಾಯಿ ನಾಡಿದು ನಮ್ಮದು
ನಮ್ಮ ಕನ್ನಡ ನಾಡಿದು
ನಮ್ಮ ನಾಡಿದು ನಮ್ಮದು
✍️ ಕವಿ : ಮಚ್ಚಿಮಲೆ ಶಂಕರ ನಾರಾಯಣರಾವ್
🌐 Published by: SCHOOL RESOURCE CENTER
🥭 ಎಟುಕಲಾರದ ಮಾವಿನ ಕಾಯಿಗಳು 🥭
ಬೇಸಿಗೆ ರಜೆಯಲಿ ಒಂದಿನ ನಾನು
ತೋಟಕೆ ಹೋಗಿದ್ದೆ/
ತುಂಬಿದ ಫಸಲಿನ ಮಾವಿನ ಮರದ
ಕೆಳಗಡೆ ನಿಂತಿದ್ದೆ//೧//

ಗಾಳಿಗೆ ತೂಗುತ ಉಯ್ಯಾಲೆ ಆಡುವ
ಕಾಯ್ಗಳ ಕಂಡಿದ್ದೆ/
ಹುಳಿ ಸಿಹಿ ರುಚಿಯ ಮಾವಿನ ಕಾಯ್ಗಳ
ನೆನೆದೂ ಹಿಗ್ಗಿದ್ದೆ!//೨//

ಉಪ್ಪುಖಾರವ ಸವರುತ ತಿನ್ನುವ
ಕನಸನು ಕಂಡಿದ್ದೆ/
ಉಳಿದರೆ ಗೆಳೆಯರ ಬಳಗಕೆ ಹಂಚಿ
ಬೀಗುವೆನೆಂದಿದ್ದೆ//೩//

ಬಾಯೊಳು ನೀರಿನ ಬುಗ್ಗೆಯು ಚಿಮ್ಮಲು
ಉಪಾಯ ಹುಡುಕಿದ್ದೆ/
ಕೋಲನು ತಂದು ಕಾಯ್ಗಳ ಬಡಿಯಲು
ಎಗರೀ ಜಿಗಿದಿದ್ದೆ//೪//

ಒಂದೇ ಒಂದು ಕಾಯಿಯು ಬೀಳದೆ
ಬೇಸರಗೊಂಡಿದ್ದೆ/
ಮರಳೀ ಯತ್ನವ ಮಾಡುವೆನೆನುತ
ಕಲ್ಲನು ಹುಡುಕಿದ್ದೆ//೫//

ಒಂದರ ಹಿಂದೆ ಒಂದೆಂಬಂತೆ
ಕಲ್ಗಳ ಹೊಡೆದಿದ್ದೆ/
ನೆಟ್ಟಿಹ ಗುರಿಯು ತಪ್ಪೇ ಹೋಯ್ತು
ಬಿಸಿಲಲಿ ಬಳಲಿದ್ದೆ!//೬//

ರಟ್ಟೆಯ ಕಸುವು ಕುಸಿಯಲು ಕೊನೆಗೆ
ಯತ್ನವ ಕೈಬಿಟ್ಟೆ
ಮೆಲ್ಲನೆ ಹಿಂದಕೆ ಸರಿಯುತ ಕಾಲಿಗೆ
ಬುದ್ಧಿಯ ಹೇಳಿದ್ದೆ!//೭//

ಎಟುಕಲಾರದ ಮಾವಿನ ಕಾಯ್ಗಳು
ಬಲುಹುಳಿ ಎಂದಿದ್ದೆ/
ಎತ್ತರ ಬೆಳೆದ ಮರವನು ಹಳಿಯುತ
ಮನೆಗೆ ಮರಳಿದ್ದೆ//೮//

ಪುಸ್ತಕದಲ್ಲಿ 'ನರಿ ಹುಳಿ' ದ್ರಾಕ್ಷಿಯ
ಕಥೆಯನು ಓದಿದ್ದೆ/
ನರಿಯ ಪಾತ್ರದಿ ನನ್ನನೆ ಕಂಡು
ನಾಚಿ ಮುದುರಿದ್ದೆ!//೯//
🌐 Published by: SCHOOL RESOURCE CENTER
🌸 ಸ್ತ್ರೀ ಅಂದರೆ ಅಷ್ಟೆ ಸಾಕೆ 🌸
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ

ಹಸಿರ ಉಟ್ಟ ಬೆಟ್ಟಗಳಲಿ
ಮೊಲೆ ಹಾಲಿನ ಹೊಳೆಯ ಇಳಿಸಿ
ಬಯಲ ಹಸಿರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ

ಮರಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳೂ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ

ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ
ಸ್ತ್ರೀ ಅಂದರೆ ಅಷ್ಟೆ ಸಾಕೆ
✍️ ರಚನೆ : ಜಿ. ಎಸ್. ಶಿವರುದ್ರಪ್ಪ
🌐 Published by: SCHOOL RESOURCE CENTER
🌙 ಬಾನಿನಲ್ಲಿ ಮೂಡಿ ಬಂದ ಚಂದಮಾಮ 🌙
ಬಾನಿನಲ್ಲಿ ಮೂಡಿ ಬಂದ ಚಂದಮಾಮ

ಮೂಡಿ ಬಂದ ಮೂಡಿ ಬಂದ ಚಂದಮಾಮ
ಕತ್ತಲನ್ನು ದೂಡಿ ನಿಂದ ಚಂದಮಾಮಾ ||

ಮೋಡದೊಡನೆ ಓಡಿ ಬಂದ ಚಂದಮಾಮ
ಓಡಿ ಬಂದ ಓಡಿ ಬಂದ ಚಂದಮಾಮ
ನಮ್ಮನ್ನು ನೋಡಿ ನಿಂದ ಚಂದಮಾಮಾ ||1||

ಮುಗಿಲ ಬೆಟ್ಟವೇರಿ ಬಂದ ಚಂದಮಾಮ
ಏರಿ ಬಂದ ಏರಿ ಬಂದ ಚಂದಮಾಮ
ತಾರೆಗಳನು ಸೇರಿ ನಿಂದ ಚಂದಮಾಮಾ ||2||

ತಂಪು ಬೆಳಕು ಬೀರಿ ಬಂದ ಚಂದಮಾಮ
ಬೀರಿ ಬಂದ ಬೀರಿ ಬಂದ ಚಂದಮಾಮ
ಜಗಕೆ ಚೆಲುವ ತೋರಿ ನಿಂದ ಚಂದಮಾಮಾ ||3||
✍️ ರಚನೆ : ಸೀತಾರಾಮ ಭಟ್ಟ
🌐 Published by: SCHOOL RESOURCE CENTER
🐓 ಕುಕ್ಕೋಳಿ 🐓
ಬೇಲಿಯ ಮೇಲೆ ಹಾರಾಡಿ
ಬೇಲಿ ಮೇಲೆ ಹಾರಾಡಿ
ಹಾರಿ ಹೋಗಿ ಜೋಲಾಡಿ
ಕೆಂಪು ಕೋಡಿ ತಾರಾಡಿ
ಹಳ್ಳಿಯ ಮನೆ ಎರಡೇ ಸಾಲು

ಕೊಕ್ ಕೊಕ್ ಕೊಕ್ ಕೊಕ್
ಕೊಕ್ ಕೊಕ್ ಕೊಕ್ ಕೊಕ್
ಕುಕ್ಕೋಳಿ

ಬೆಳ್ಳಂ ಬೆಳಗ್ಗೆ ಕೂಗಾಯ್ತು
ಹಳ್ಳಿಯೆಲ್ಲಾ ಕೂಗಾಯ್ತು
ಏಳಿ ಏಳಿ ಎದ್ದೇಳಿ
ಸಂಜೆ ಹಳ್ಳಿಯ ಗಡಿಯಾರ
🌐 Published by: SCHOOL RESOURCE CENTER
🌙 ಚಂದಮಾಮ ಬಂದ ಮಾಮ 🌙
ಚಂದ ಮಾಮ ಬಾರಯ್ಯ
ನನ್ನ ಮನೆಗೆ ಬಾರಯ್ಯ
ಹಾಲು ಸಕ್ಕರೆ ಕೂಡಿಸಿ ಕೊಡುವೆ
ಕುಡಿಯಲು ಬೆಳ್ಳಿಯ ಬಟ್ಟಲು ಕೊಡುವೆ

ಸಕ್ಕರೆ ಕಡ್ಡಿ ತರುತ್ತೀನಿ
ಮಿಠಾಯಿ ನಿನಗೆ ಕೊಡುತ್ತೀನಿ
ಇಬ್ಬರು ಸೇರಿ ತಿನ್ನೋಣ
ಇಬ್ಬರು ಕೂಡಿ ಆಡೋಣ

ಎಲ್ಲಿಗೆ ಹೋದ್ರು ಬರುವೆಯಾ
ಅಲ್ಲಿ ದೂರದಲ್ಲಿ ಇರುವೆನಾ
ಹಿಂದೆ - ಹಿಂದೆ ಬರುವೆಯಾ
ಎಲ್ಲಂದೆ ಅಲ್ಲೇ ನಿಲ್ಲುವೆಯಾ
🌐 Published by: SCHOOL RESOURCE CENTER
🎺 ಬಣ್ಣದ ತಗಡಿನ ತುತ್ತೂರಿ 🎺
ಬಣ್ಣದ ತಗಡಿನ ತುತ್ತೂರಿ
ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ

ಸರಿಗಮ ಪದನಿಸ ಊದಿದನು
ಸನಿದಪ ಮಗರಿಸ ಊದಿದನು

ತನಗೆ ತುತ್ತೂರಿ ಇದೆ ಎಂದು
ಬೇರಾರಿಗೂ ಅದು ಇಲ್ಲೆಂದು
ತುತ್ತೂರಿ ಊದಿದನು ಬೀದಿಯಲಿ
ಜಂಬದ ಕೋಳಿಯ ರೀತಿಯಲಿ

ತುತ್ತೂರಿ ಊದುತ ಕೊಳದ ಬಳಿ
ನಡೆದನು ಕಸ್ತೂರಿ ಸಂಜೆಯಲಿ
ಜಾರಿತು ನೀರಿಗೆ ತುತ್ತೂರಿ
ಗಂಟಲು ಕಟ್ಟಿತು ನೀರುಪಾಲು

ಕಸ್ತೂರಿ ಊದಲು ನೋಡಿದನು
ಗ ಗ ಗ ಗ ಸದ್ದನು ಮಾಡಿದನು
ಬಣ್ಣವು ನೀರಿನ ಪಾಲಾಯಿತು
ಬಣ್ಣದ ತುತ್ತೂರಿ ಬೋಳಾಯಿತು

ತುತ್ತೂರಿ ಬೋಳಾಯಿತು ಹಳ್ಳಿಯಲಿ
ಜಂಬದ ಕೋಳಿಗೆ ಗೊಳ್ಳಾಯಿತು
✍️ ಕವಿ : ಜ.ಪಿ. ರಾಜರತ್ನಂ
🌐 Published by: SCHOOL RESOURCE CENTER
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive