🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Thursday, May 21, 2026

ಸೈನ್ಸ್ ಸಂಗತಿ!

ಸೈನ್ಸ್ ಸಂಗತಿ!

ನೀರು ಕುದಿಯಲು, ಹಾಲು ಉಕ್ಕಲು ಮತ್ತು ಎಣ್ಣೆ ಸಿಡಿಯಲು ಕಾರಣವೇನು?

ಉತ್ತರ: ಭೂಮಿಯ ಮೇಲೆ ಇರುವ ವಸ್ತುಗಳು ಬಹಳ ವಿಚಿತ್ರವಾದ ಗುಣಗಳನ್ನು ಹೊಂದಿವೆ. ಈ ಕೆಳಗಿನ ಎಲ್ಲಾ ಕ್ರಿಯೆಗಳು ನಡೆಯಲು ಮೂಲ ಕಾರಣ ಶಾಖದ ಹೊರ ಹಾಕುವಿಕೆ ಅಷ್ಟೇ.

1. ನೀರು ಕುದಿಯುವುದು

ನೀರಿಗೆ ಶಾಖ ಕೊಟ್ಟಾಗ, ಹೆಚ್ಚಾದ ಶಾಖ ಹೊರ ಹೋಗಲು ನೀರಿನ ಕಣಗಳನ್ನು ಮೇಲ್ಮುಖವಾಗಿ ಚಲಿಸುವಂತೆ ಮಾಡುತ್ತದೆ. ನೀರು ಕುದಿಯುತ್ತಾ ಬಿಸಿ ಹೊರ ಹೋಗುತ್ತದೆ.

2. ಹಾಲು ಉಕ್ಕುವುದು

ಹಾಲಿನಲ್ಲಿ ನೀರು ಇರುವುದರಿಂದ ಹೆಚ್ಚಾದ ಶಾಖ ಹೊರಹೋಗುವಾಗ ಹಾಲಿನಕೆನೆ ಮೇಲ್ಭಾಗದಲ್ಲಿ ಬಂದು, ಶಾಖ ನೀರಿನ ಮೂಲಕ ಹೊರ ಹೋಗದಂತೆ ತಡೆಯುತ್ತದೆ. ಒತ್ತಡ ಹೆಚ್ಚಾದಾಗ, ಕೆನೆ ಪಕ್ಕಕ್ಕೆ ಸರಿದು ಹಾಲು ಉಕ್ಕುತ್ತದೆ ಮತ್ತು ಶಾಖ ಹೊರ ಹೋಗುತ್ತದೆ.

3. ಎಣ್ಣೆ ಸಿಡಿಯುವುದು

ಎಣ್ಣೆಯಲ್ಲಿ ನೀರಿಲ್ಲ. ಹಾಗಾಗಿ ಶಾಖ ವರ್ಗಾವಣೆ ಆಗದೆ, ಒಳಗೆ ಉಳಿದುಕೊಂಡು ಗುಪ್ತವಾಗಿರುತ್ತದೆ. ಅದಕ್ಕಾಗಿ ಕಾಯ್ದ ಎಣ್ಣೆಯಲ್ಲಿ ಚಿಕ್ಕ ವಸ್ತು (ಅಥವಾ ನೀರಿನ ಹನಿ) ಬಿದ್ದಾಗ ಶಾಖ ಅದರ ಮೂಲಕ ಹೊರ ಬರುವಾಗ ಜೋರಾಗಿ ಸಿಡಿಯುತ್ತದೆ.

ಸೈನ್ಸ್ ಸಂಗತಿ!

ಮಳೆ ಬರುವ ಮೊದಲು ಗುಡುಗು ಮತ್ತು ಮಿಂಚು ಯಾಕೆ ಬರುತ್ತದೆ?

ಭೂಮಿ, ನೆಲಕ್ಕೆ ಸಮೀಪದಲ್ಲಿ ಸಾಗುತ್ತಿರುವ ಮೋಡ ಮತ್ತು ಭೂಮಿಗಿಂತ ತುಂಬಾ ಎತ್ತರದಲ್ಲಿರುವ ಮೋಡಗಳ ನಡುವಿನ ವಿದ್ಯುತ್ ಕಣಗಳು ಒಂದಕ್ಕೊಂದು ವಿರುದ್ಧವಾಗಿದ್ದರೆ ಅಂದರೆ ಧನಾತ್ಮಕ ಮತ್ತು ಋಣಾತ್ಮಕ ವಿದ್ಯುತ್ ಕಣಗಳಾಗಿದ್ದರೆ ಆಗ ಅವುಗಳು ಪರಸ್ಪರ ಆಕರ್ಷಿತವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಬೃಹತ್ ಪ್ರಮಾಣದಲ್ಲಿ ವಿದ್ಯುತ್ ಸೃಷ್ಟಿಯಾದಾಗ ಅದು ಭೂಮಿಯತ್ತ (ಗ್ರೌಂಡಿಂಗ್) ಸಾಗಿ ಬರುತ್ತದೆ. ಆಗ ಅದು ಮಿಂಚಿನ ರೂಪದಲ್ಲಿ ನಮ್ಮ ಕಣ್ಣಿಗೆ ಕಾಣಿಸುತ್ತದೆ. ಹೀಗೆ ಅಗಾಧ ಪ್ರಮಾಣದಲ್ಲಿ ವಿದ್ಯುತ್ ಸೃಷ್ಟಿಯಾದಾಗ ಅದರ ಉಷ್ಣತೆ 54000 ಡಿಗ್ರಿ ಫ್ಯಾರನ್ ಹೀಟ್ ಆಗಿರುತ್ತದೆ. ಸೂರ್ಯನ ಶಾಖದಿಂದಲೂ ಐದು ಪಟ್ಟು ಹೆಚ್ಚು ಉಷ್ಣತೆ ಹೊಂದಿರುತ್ತದೆ. ಇದರಿಂದ ವಾತಾವರಣದಲ್ಲಿರುವ ಗಾಳಿ ಶಬ್ದದ ವೇಗ ಕ್ಕಿಂತಲೂ ಹೆಚ್ಚು ವೇಗದಲ್ಲಿ ವಿಸ್ತರಿಸಲು ಆರಂಭವಾದಾಗ ಗುಡುಗಾಗಿ ನಮಗೆ ಕೇಳಿಸುತ್ತದೆ.

Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive