🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Monday, June 8, 2026

NIRANTHARA AI ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳ ಹಾಜರಾತಿ ಗುರುತು ವ್ಯವಸ್ಥೆ

🤖

NIRANTHARA AI

ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳ ಹಾಜರಾತಿ ಗುರುತು ವ್ಯವಸ್ಥೆ

📂 ಒಟ್ಟು ಫೈಲ್‌ಗಳು : 0

📢 ನಿರಂತರ ಆಪ್ – ವಿದ್ಯಾರ್ಥಿಗಳ ನೋಂದಣಿ ಸಮಸ್ಯೆಗಳಿಗೆ ಪರಿಹಾರ

ಕರ್ನಾಟಕ ಸರ್ಕಾರದ ವಿದ್ಯಾರ್ಥಿಗಳ Face-Based Attendance System ಆದ ‘ನಿರಂತರ’ (Nirantara) App ನಲ್ಲಿ ವಿದ್ಯಾರ್ಥಿಗಳ ನೋಂದಣಿ ಮಾಡುವಾಗ ಕೆಲವು ತಾಂತ್ರಿಕ ಸಮಸ್ಯೆಗಳು ಕಂಡುಬರುತ್ತಿವೆ. ಅವುಗಳನ್ನು ಆಪ್‌ನಲ್ಲಿರುವ Grievance ಆಯ್ಕೆಯ ಮೂಲಕ ಪರಿಹರಿಸಬಹುದು.

❶ ತರಗತಿ ಮತ್ತು ಸೆಕ್ಷನ್ ಆಯ್ಕೆ ಆಗದಿರುವುದು

ಸಮಸ್ಯೆ: Register Student ಪುಟದಲ್ಲಿ Class & Section ಆಯ್ಕೆ ಮಾಡಲು ಕ್ಲಿಕ್ ಮಾಡಿದಾಗ ಯಾವುದೇ ಆಯ್ಕೆ ಕಾಣಿಸುತ್ತಿಲ್ಲ.

✅ ಪರಿಹಾರ:

  • Grievance ಆಯ್ಕೆ ಕ್ಲಿಕ್ ಮಾಡಿ.
  • Select Issue Type ನಲ್ಲಿ Registration Issue ಆಯ್ಕೆ ಮಾಡಿ.
  • Description ನಲ್ಲಿ ಈ ಕೆಳಗಿನ ಸಂದೇಶ ಬರೆಯಿರಿ:
  • "While registering the students, class and section tab is not working"
  • ಶಾಲೆಯ ಹೆಸರು, ತಾಲೂಕು, ಜಿಲ್ಲೆ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ.
  • ಸಂಬಂಧಿಸಿದ ಸ್ಕ್ರೀನ್‌ಶಾಟ್ ಅಪ್‌ಲೋಡ್ ಮಾಡಿ.
  • Submit ಬಟನ್ ಕ್ಲಿಕ್ ಮಾಡಿ.

❷ ಕಳೆದ ವರ್ಷದ ವಿದ್ಯಾರ್ಥಿಗಳ ಪಟ್ಟಿ ತೋರಿಸುತ್ತಿರುವುದು

ಸಮಸ್ಯೆ: Get Student List ನೀಡಿದಾಗ ಪ್ರಸ್ತುತ ಸಾಲಿನ ಬದಲು ಕಳೆದ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪಟ್ಟಿ ಕಾಣಿಸುತ್ತಿದೆ.

✅ ಪರಿಹಾರ:

  • Grievance ಗೆ ಹೋಗಿ.
  • Registration Issue ಆಯ್ಕೆ ಮಾಡಿ.
  • Description ನಲ್ಲಿ ಈ ಸಂದೇಶ ಬರೆಯಿರಿ:
  • "ವಿದ್ಯಾರ್ಥಿಗಳ ನೊಂದಣಿ ಮಾಡುವಾಗ ಕಳೆದ ವರ್ಷದ ಪಟ್ಟಿ ಬರುತ್ತಿದ್ದು, ಪ್ರಸ್ತುತ ಸಾಲಿನ ವಿದ್ಯಾರ್ಥಿಗಳ ಪಟ್ಟಿಯನ್ನು ಅಪ್ಡೇಟ್ ಮಾಡಿ"
  • ಶಾಲೆಯ ವಿವರಗಳನ್ನು ನಮೂದಿಸಿ.
  • ಸ್ಕ್ರೀನ್‌ಶಾಟ್ ಅಪ್‌ಲೋಡ್ ಮಾಡಿ.
  • Submit ಮಾಡಿ.
📌 ಗಮನಿಸಿ:

ನೀವು ಸಲ್ಲಿಸಿದ ದೂರಿನ ಸ್ಥಿತಿಯನ್ನು Raised Grievance ವಿಭಾಗದಲ್ಲಿ ಪರಿಶೀಲಿಸಬಹುದು. ಇಲಾಖೆಯಿಂದ ಸಮಸ್ಯೆ ಪರಿಹಾರವಾದ ನಂತರ ಅಲ್ಲಿ “Problem Solved” ಎಂದು ತೋರಿಸಲಾಗುತ್ತದೆ.

📱 ನಿರಂತರ ಆಪ್ ಸಮಸ್ಯೆಗಳ ಪರಿಹಾರ ಮಾರ್ಗದರ್ಶಿ

🔐 1. ಲಾಗಿನ್ ಪ್ರಕ್ರಿಯೆ

  • KGID ಸಂಖ್ಯೆಯನ್ನು ಬಳಸಿಕೊಂಡು ನಿರಂತರ ಆಪ್‌ಗೆ ಲಾಗಿನ್ ಮಾಡಿ.
  • ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ನಮೂದಿಸಿ ಅಪ್ಲಿಕೇಶನ್ ಪ್ರವೇಶಿಸಿ.

📸 2. ವಿದ್ಯಾರ್ಥಿಗಳ ಫೋಟೋ ಬದಲಾದಾಗ (Registration Issue)

  • Grievance ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • Select Issue Type ನಲ್ಲಿ Registration Issue ಆಯ್ಕೆ ಮಾಡಿ.
  • Issue Description ನಲ್ಲಿ "Other student photo captured" ಎಂದು ನಮೂದಿಸಿ.
  • ಸಂಬಂಧಿತ ವಿದ್ಯಾರ್ಥಿಯ STS ಸಂಖ್ಯೆ ನಮೂದಿಸಿ.
  • ಶಾಲೆಯ ಹೆಸರು ಮತ್ತು ಸಂಪರ್ಕ ಸಂಖ್ಯೆಯನ್ನು ನೀಡಿ Submit ಕ್ಲಿಕ್ ಮಾಡಿ.

✅ 3. ಅನುಮೋದನೆಯ ನಂತರ ಮರು-ನೋಂದಣಿ

  • ಅನುಮೋದನೆಗೆ ಸಾಮಾನ್ಯವಾಗಿ ½ ದಿನದಿಂದ 2 ದಿನ ಸಮಯ ಬೇಕಾಗಬಹುದು.
  • Register Student ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ತರಗತಿ ಮತ್ತು ಸೆಕ್ಷನ್ ಆಯ್ಕೆ ಮಾಡಿ Get Student ಕ್ಲಿಕ್ ಮಾಡಿ.
  • ಸಂಬಂಧಿತ ವಿದ್ಯಾರ್ಥಿಯ ಹೆಸರಿನ ಮುಂದೆ Not Registered ಎಂದು ತೋರಿಸುತ್ತದೆ.
  • ಅದರ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಯ 3 ಹೊಸ ಫೋಟೋಗಳನ್ನು ತೆಗೆದು Submit ಮಾಡಿ.

🛠️ 4. ಇತರೆ ಸಮಸ್ಯೆಗಳ ಪರಿಹಾರ

📂 Data Issue: ಕಳೆದ ವರ್ಷದ ಮಕ್ಕಳ ಹೆಸರುಗಳು ಬರುತ್ತಿದ್ದರೆ ಅಥವಾ ಡಾಟಾ ಸರಿಯಾಗಿ ಫೆಚ್ ಆಗದಿದ್ದರೆ Data Issue ಆಯ್ಕೆ ಮಾಡಿ ಸಮಸ್ಯೆ ವಿವರಿಸಿ.

⚙️ Technical Issue: ಫೋಟೋ ಕ್ಯಾಪ್ಚರ್ ಆಗದಿದ್ದರೆ ಅಥವಾ ಇತರೆ ತಾಂತ್ರಿಕ ಸಮಸ್ಯೆಗಳಿದ್ದರೆ Screenshot ತೆಗೆದು Technical Issue ಅಡಿಯಲ್ಲಿ ಅಪ್ಲೋಡ್ ಮಾಡಿ.

👨‍🎓 ಹೆಸರುಗಳು ಕಾಣಿಸದಿದ್ದರೆ: ಹೊಸದಾಗಿ ಸೇರಿದ ವಿದ್ಯಾರ್ಥಿಗಳ ಹೆಸರುಗಳು ಪಟ್ಟಿಯಲ್ಲಿ ಕಾಣಿಸದಿದ್ದರೂ Grievance ಮೂಲಕ ದೂರು ಸಲ್ಲಿಸಬಹುದು.

📢 ಮೇಲಿನ ಹಂತಗಳನ್ನು ಅನುಸರಿಸುವ ಮೂಲಕ ತಾಂತ್ರಿಕ ತಂಡವು ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ನೀವು ಸರಿಯಾದ ಡಾಟಾವನ್ನು ಪಡೆಯಬಹುದು.
📸 ನಿರಂತರ (NIRANTARA) App
AI Facial Recognition ಮೂಲಕ ವಿದ್ಯಾರ್ಥಿಗಳ ಹಾಜರಾತಿ ವ್ಯವಸ್ಥೆ
ಹಂತ 1

🔐 ಲಾಗಿನ್ ಪ್ರಕ್ರಿಯೆ (Login Process)

  • ಪ್ಲೇ ಸ್ಟೋರ್‌ನಿಂದ ನಿರಂತರ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಮುಖ್ಯೋಪಾಧ್ಯಾಯರು (HM) ಅಥವಾ ಶಿಕ್ಷಕರು ತಮ್ಮ KGID ಸಂಖ್ಯೆ ಬಳಸಿ ಲಾಗಿನ್ ಆಗಬೇಕು.
  • OTP ನಮೂದಿಸಿ ದೃಢೀಕರಣ ಪೂರ್ಣಗೊಳಿಸಬೇಕು.
ಹಂತ 2

👦 ಮಕ್ಕಳ ರಿಜಿಸ್ಟ್ರೇಷನ್ (Student Registration)

  • Home Page ನಲ್ಲಿ Register Student ಆಯ್ಕೆ ಕ್ಲಿಕ್ ಮಾಡಬೇಕು.
  • ತರಗತಿ ಹಾಗೂ ಸೆಕ್ಷನ್ ಆಯ್ಕೆ ಮಾಡಿದರೆ SATS ಲಿಂಕ್ ಮಕ್ಕಳ ಪಟ್ಟಿ ಕಾಣುತ್ತದೆ.
  • ಮಗುವಿನ ಹೆಸರಿನ ಮುಂದಿನ Not Registered ಆಯ್ಕೆ ಕ್ಲಿಕ್ ಮಾಡಬೇಕು.
  • Camera Permission ನೀಡಬೇಕು.
  • ಮಗುವಿನ ಮುಖಕ್ಕೆ ಸರಿಯಾಗಿ ಬೆಳಕು ಬೀಳುವಂತೆ ನಿಲ್ಲಿಸಬೇಕು.
  • ಮುಂಭಾಗ, ಎಡ ಮತ್ತು ಬಲಭಾಗದಿಂದ ಮೂರು ಫೋಟೋಗಳನ್ನು ತೆಗೆದು ರಿಜಿಸ್ಟ್ರೇಷನ್ ಪೂರ್ಣಗೊಳಿಸಬೇಕು.
ಹಂತ 3

✅ ದೈನಂದಿನ ಹಾಜರಾತಿ (Marking Attendance)

  • ಬೆಳಗ್ಗೆ (Morning) ಮತ್ತು ಮಧ್ಯಾಹ್ನ (Afternoon) ಪ್ರತ್ಯೇಕ ಹಾಜರಾತಿ ಹಾಕಬೇಕು.
  • ಮಕ್ಕಳ ಮುಖ ಸ್ಪಷ್ಟವಾಗಿ ಕಾಣುವಂತೆ ಗುಂಪು ಫೋಟೋ ತೆಗೆದುಕೊಳ್ಳಬಹುದು.
  • ಒಮ್ಮೆ ಫೋಟೋದಲ್ಲಿ ಸುಮಾರು 50 ರಿಂದ 80 ಮಕ್ಕಳನ್ನು ಗುರುತಿಸಬಹುದು.
  • ಫೋಟೋ ಬ್ಲರ್ ಆಗಿದ್ದರೆ ಆ ಮಗುವಿನ ಫೋಟೋವನ್ನು ಪ್ರತ್ಯೇಕವಾಗಿ ಮತ್ತೆ ಕ್ಯಾಪ್ಚರ್ ಮಾಡಬೇಕು.
  • ತಡವಾಗಿ ಬಂದ ವಿದ್ಯಾರ್ಥಿಯ ಫೋಟೋ ತೆಗೆದು ನಂತರ ಹಾಜರಾತಿ ದಾಖಲಿಸಬಹುದು.
ಹಂತ 4

📊 ವರದಿಗಳು ಮತ್ತು ದೂರು ಸಲ್ಲಿಕೆ

  • ಒಟ್ಟು ಮಕ್ಕಳು, ರಿಜಿಸ್ಟರ್ ಆದವರು ಹಾಗೂ ಹಾಜರಾತಿ ವರದಿಗಳನ್ನು ನೋಡಬಹುದು.
  • ತರಗತಿವಾರು Morning / Afternoon Present & Absent ಮಾಹಿತಿ ಲಭ್ಯ.
  • ತಾಂತ್ರಿಕ ಸಮಸ್ಯೆಗಳಿದ್ದರೆ Grievance ಸಲ್ಲಿಸಬಹುದು.
  • ಸಮಸ್ಯೆಯ ವಿವರ, ಸಂಪರ್ಕ ಸಂಖ್ಯೆ, Location ಹಾಗೂ Screenshot ಅಪ್ಲೋಡ್ ಮಾಡಬಹುದು.
  • Raised Grievances ನಲ್ಲಿ ದೂರಿನ ಸ್ಥಿತಿ ಪರಿಶೀಲಿಸಬಹುದು.

⚙️ ಪ್ರಮುಖ ಸಮಸ್ಯೆಗಳು ಹಾಗೂ ಪರಿಹಾರಗಳು

  • HM ಶಾಲೆಯಲ್ಲಿ ಇಲ್ಲದಿದ್ದಾಗ: ಇತರ ಶಿಕ್ಷಕರು ತಮ್ಮ KGID ಬಳಸಿ ಹಾಜರಾತಿ ಹಾಕಬಹುದು.
  • TC ಆದ ವಿದ್ಯಾರ್ಥಿಗಳು: Facial Recognition SATS ಸಂಖ್ಯೆಗೆ ಲಿಂಕ್ ಆಗಿರುವುದರಿಂದ ಮರು-ರಿಜಿಸ್ಟ್ರೇಷನ್ ಅಗತ್ಯವಿಲ್ಲ.
  • Guest Teacher / Deputation: ಸದ್ಯಕ್ಕೆ ಆಯ್ಕೆ ಇಲ್ಲ. ಮುಂದಿನ ದಿನಗಳಲ್ಲಿ Unique Teacher ID ಮೂಲಕ ಪರಿಹಾರ ನೀಡುವ ಪ್ರಸ್ತಾಪವಿದೆ.
  • Sports / ಪ್ರತಿಭಾ ಕಾರಂಜಿ ಕಾರ್ಯಕ್ರಮ: ಮಕ್ಕಳ ಜೊತೆ ಹೋದ ಶಿಕ್ಷಕರು ಅಲ್ಲಿಯೇ ಫೋಟೋ ತೆಗೆದು ಹಾಜರಾತಿ ಹಾಕಬಹುದು.
📌 ಗಮನಿಸಿ:
ಈ ಮಾಹಿತಿಯು 01-06-2026 ರಂದು ಆಪ್‌ನಲ್ಲಿ ಲಭ್ಯವಿದ್ದ ಆಯ್ಕೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಮುಂದಿನ ಆಪ್ ಅಪ್‌ಡೇಟ್‌ಗಳಲ್ಲಿ ಕೆಲವು ಆಯ್ಕೆಗಳು ಮತ್ತು ಪ್ರಕ್ರಿಯೆಗಳು ಬದಲಾಗುವ ಸಾಧ್ಯತೆ ಇದೆ.

ನಿರಂತರ (NIRANTARA)

AI ಆಧಾರಿತ ಮುಖ ಗುರುತಿಸುವಿಕೆ ಹಾಜರಾತಿ ವ್ಯವಸ್ಥೆ

ಸಮಗ್ರ ಶಿಕ್ಷಣ ಕರ್ನಾಟಕ • ಶಾಲಾ ಶಿಕ್ಷಣ ಇಲಾಖೆ

📘 ಯೋಜನೆಯ ಹಿನ್ನೆಲೆ

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ “ನಿರಂತರ” (NIRANTARA) ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು AI ಆಧಾರಿತ ಮುಖ ಗುರುತಿಸುವಿಕೆ (Face Recognition) ತಂತ್ರಜ್ಞಾನದ ಮೂಲಕ ದಾಖಲಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.

2026–27ನೇ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಈ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ.

🎯 ಯೋಜನೆಯ ಉದ್ದೇಶಗಳು

  • ವಿದ್ಯಾರ್ಥಿಗಳ ಹಾಜರಾತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸುವುದು
  • ಹಾಜರಾತಿ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು
  • ಗೈರುಹಾಜರಾತಿಯನ್ನು ಕಡಿಮೆಗೊಳಿಸುವುದು
  • SATS ದತ್ತಾಂಶದೊಂದಿಗೆ ಏಕೀಕರಣ
  • ರಾಜ್ಯ ಮಟ್ಟದಲ್ಲಿ ಪರಿಣಾಮಕಾರಿ ಮೇಲ್ವಿಚಾರಣೆ
  • ಡಿಜಿಟಲ್ ಶಿಕ್ಷಣ ಆಡಳಿತವನ್ನು ಬಲಪಡಿಸುವುದು

⭐ ಪ್ರಮುಖ ವೈಶಿಷ್ಟ್ಯಗಳು

  • ಮೊಬೈಲ್ ಆಧಾರಿತ ಅಪ್ಲಿಕೇಶನ್
  • AI ಮತ್ತು Face Recognition ತಂತ್ರಜ್ಞಾನ
  • ಸ್ವಯಂಚಾಲಿತ ಹಾಜರಾತಿ ದಾಖಲೆ
  • SATS ಜೊತೆ ನೇರ ಸಂಪರ್ಕ
  • ತಕ್ಷಣದ ವರದಿಗಳು
  • ಕ್ಲೌಡ್ ಆಧಾರಿತ ಡೇಟಾ ನಿರ್ವಹಣೆ

🤖 AI ಹಾಜರಾತಿ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?

AI ಆಧಾರಿತ ಹಾಜರಾತಿ ವ್ಯವಸ್ಥೆಯು ಕೆಲವೇ ಸೆಕೆಂಡುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯನ್ನು ದಾಖಲಿಸಲು ಸಹಾಯ ಮಾಡುತ್ತದೆ.

ಸಾಂಪ್ರದಾಯಿಕ Roll Call ವಿಧಾನಕ್ಕಿಂತ ಇದು ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ವಿದ್ಯಾರ್ಥಿಯ ಕಣ್ಣು, ಮೂಗು ಹಾಗೂ ಇತರ ಮುಖದ ಲಕ್ಷಣಗಳನ್ನು ವಿಶ್ಲೇಷಿಸಿ ನಿಖರವಾಗಿ ಗುರುತಿಸಲಾಗುತ್ತದೆ.

✅ AI ಆಧಾರಿತ ಹಾಜರಾತಿ ವ್ಯವಸ್ಥೆಯ ಪ್ರಯೋಜನಗಳು

  • ಸಮಯ ಉಳಿತಾಯ – ಶಿಕ್ಷಕರ ಅಮೂಲ್ಯ ಸಮಯ ಉಳಿಯುತ್ತದೆ.
  • ಹೆಚ್ಚಿನ ನಿಖರತೆ – ಮಾನವ ದೋಷಗಳು ಕಡಿಮೆಯಾಗುತ್ತವೆ.
  • ಪ್ರಾಕ್ಸಿ ಹಾಜರಾತಿಗೆ ತಡೆ – ಇತರರ ಪರವಾಗಿ ಹಾಜರಾತಿ ಸಾಧ್ಯವಿಲ್ಲ.
  • ನೈಜ ಸಮಯದ ಮಾಹಿತಿ – SATS ಮೂಲಕ ತಕ್ಷಣ ಮಾಹಿತಿ ಲಭ್ಯ.
  • ಶಿಕ್ಷಣದ ಗುಣಮಟ್ಟ ಸುಧಾರಣೆ – ಬೋಧನೆಗೆ ಹೆಚ್ಚು ಸಮಯ ಸಿಗುತ್ತದೆ.

🏫 BRC & CRP ಜವಾಬ್ದಾರಿಗಳು

  • ಶಾಲೆಗಳಲ್ಲಿ ಪರಿಣಾಮಕಾರಿ ಅನುಷ್ಠಾನ
  • ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ
  • ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ
  • ನಿರಂತರ ಮೇಲ್ವಿಚಾರಣೆ
  • 100% ಹಾಜರಾತಿ ದಾಖಲೆ ಖಚಿತಪಡಿಸುವುದು
  • ಶಾಲೆ ಬಿಟ್ಟ ಮಕ್ಕಳ ಮರು ದಾಖಲಾತಿಗೆ ಸಹಕಾರ

🎥 ಡೆಮೊ ವಿಡಿಯೋ ವಿಷಯಗಳು

  • ನಿರಂತರ App ಬಳಸುವ ವಿಧಾನ
  • ವಿದ್ಯಾರ್ಥಿಗಳ ಹಾಜರಾತಿ ದಾಖಲಿಸುವ ವಿಧಾನ
  • ಸಾಮಾನ್ಯ ಸಮಸ್ಯೆಗಳು ಮತ್ತು ಪರಿಹಾರಗಳು
  • NIRANTARA ಮೊಬೈಲ್ ಅಪ್ಲಿಕೇಶನ್ ಡೆಮೊ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive