🇵🇹 ಪೋರ್ಚುಗೀಸರು
☛ ಕ್ರಿ.ಶ 1453 ರಲ್ಲಿ ಅಟೋಮನ್ ಟರ್ಕರು ಕಾನ್ಸ್‌ಟಾಂಟಿನೋಪಲ್ ವಶಪಡಿಸಿಕೊಂಡ ಕಾರಣ ಹೊಸ ವ್ಯಾಪಾರ ಮಾರ್ಗಗಳ ಹುಡುಕಾಟ ಆರಂಭವಾಯಿತು.
☛ ವಾಸ್ಕೋಡಿಗಾಮ ಕ್ರಿ.ಶ 1498 ರಲ್ಲಿ ಭಾರತಕ್ಕೆ ಜಲಮಾರ್ಗವನ್ನು ಪತ್ತೆಹಚ್ಚಿದನು.
☛ ಅವನು ಮೊದಲು ಬಂದಿಳಿದ ಸ್ಥಳ : ಕಲ್ಲಿಕೋಟೆ
☛ ಕಲ್ಲಿಕೋಟೆಯ ದೊರೆ ಜಾಮೂರಿನ್ ವಾಸ್ಕೋಡಿಗಾಮನಿಗೆ ವ್ಯಾಪಾರದ ಅನುಮತಿ ನೀಡಿದನು.
☛ ಪೋರ್ಚುಗೀಸರು ತಮ್ಮ ಮೊದಲ ವ್ಯಾಪಾರಿ ಕೇಂದ್ರವನ್ನು ಕೊಚ್ಚಿನ್ ನಲ್ಲಿ ಸ್ಥಾಪಿಸಿದರು.
☛ ನಂತರ ಇವರ ರಾಜಧಾನಿ ಗೋವಾ ಆಯಿತು.
☛ ಮೊದಲ ಗವರ್ನರ್ : ಫ್ರಾನ್ಸಿಸ್ಕೋ ಡಿ ಅಲ್ಮೇಡಾ
☛ ಪ್ರಸಿದ್ಧ ಗವರ್ನರ್ : ಅಲ್ಫಾನ್ಸೋ ಡಿ ಅಲ್ಬುಕರ್ಕ್
☛ ಪೋರ್ಚುಗೀಸರು ಕ್ರಿ.ಶ 1961 ಡಿಸೆಂಬರ್ 19 ರವರೆಗೆ ಗೋವಾದಲ್ಲಿ ನೆಲೆಸಿದ್ದರು.
🇳🇱 ಡಚ್ಚರು
☛ ಡಚ್ಚ್ ಈಸ್ಟ್ ಇಂಡಿಯಾ ಕಂಪನಿ ಕ್ರಿ.ಶ 1602 ರಲ್ಲಿ ಸ್ಥಾಪನೆಯಾಯಿತು.
☛ ಇದು ಹಾಲೆಂಡ್ / ನೆದರ್‌ಲ್ಯಾಂಡ್ ದೇಶಕ್ಕೆ ಸೇರಿದ ಕಂಪನಿಯಾಗಿತ್ತು.
☛ ಕ್ರಿ.ಶ 1605 ರಲ್ಲಿ ಮಚಲಿಪಟ್ಟಣದಲ್ಲಿ ತಮ್ಮ ಮೊದಲ ವ್ಯಾಪಾರಿ ಮಳಿಗೆಯನ್ನು ಸ್ಥಾಪಿಸಿದರು.
☛ ಮಚಲಿಪಟ್ಟಣವೇ ಇವರ ರಾಜಧಾನಿಯಾಗಿತ್ತು.
☛ ಕ್ರಿ.ಶ 1759 ರಲ್ಲಿ ಬ್ರಿಟಿಷರ ವಿರುದ್ಧ ನಡೆದ ಯುದ್ಧದಲ್ಲಿ ಡಚ್ಚರು ಸೋತರು.
🇬🇧 ಬ್ರಿಟಿಷರು
☛ ಕ್ರಿ.ಶ 1600 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು.
☛ ಇದು ಒಂದು ಖಾಸಗಿ ಕಂಪನಿ ಆಗಿತ್ತು.
☛ ಕ್ರಿ.ಶ 1608 ರಲ್ಲಿ ಕ್ಯಾಪ್ಟನ್ ಹಾಕಿನ್ಸ್ ನಾಯಕತ್ವದಲ್ಲಿ ಭಾರತಕ್ಕೆ ಬಂದರು.
☛ ಅವರು ಮೊದಲು ತಲುಪಿದ ಸ್ಥಳ : ಸೂರತ್
☛ ಭಾರತಕ್ಕೆ ಬಂದ ಮೊದಲ ಬ್ರಿಟಿಷ್ ರಾಯಭಾರಿ : ಕ್ಯಾಪ್ಟನ್ ಹಾಕಿನ್ಸ್
☛ ಸರ್ ಥಾಮಸ್ ರೋ ಜಹಾಂಗಿರನಿಂದ ವ್ಯಾಪಾರದ ಅನುಮತಿ ಪಡೆದನು.
☛ ಬ್ರಿಟಿಷರ ಮೊದಲ ವ್ಯಾಪಾರಿ ಕೇಂದ್ರ : ಸೂರತ್
☛ ಮೊದಲ ರಾಜಧಾನಿ : ಮುರ್ಷಿದಾಬಾದ್
☛ ನಂತರದ ರಾಜಧಾನಿಗಳು : ಕಲ್ಕತ್ತಾ ಮತ್ತು ದೆಹಲಿ
🇫🇷 ಫ್ರೆಂಚರು
☛ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಕ್ರಿ.ಶ 1664 ರಲ್ಲಿ ಸ್ಥಾಪನೆಯಾಯಿತು.
☛ ಇದು ಸರ್ಕಾರಿ ಸ್ವಾಮ್ಯದ ಕಂಪನಿ ಆಗಿತ್ತು.
☛ ಕ್ರಿ.ಶ 1667 ರಲ್ಲಿ ಸೂರತ್‌ನಲ್ಲಿ ತಮ್ಮ ಮೊದಲ ವ್ಯಾಪಾರಿ ಕೋಟೆಯನ್ನು ಆರಂಭಿಸಿದರು.
☛ ಫ್ರೆಂಚರ ರಾಜಧಾನಿ : ಪಾಂಡಿಚೇರಿ
☛ ಡೂಪ್ಲೆ ಫ್ರೆಂಚರ ಅಧಿಕಾರ ವಿಸ್ತರಣೆಯಲ್ಲಿ ಮಹತ್ವದ ಪಾತ್ರ ವಹಿಸಿದನು.
⚔️ ಕರ್ನಾಟಿಕ್ ಯುದ್ಧಗಳು
೧) ಮೊದಲನೇ ಕರ್ನಾಟಿಕ್ ಯುದ್ಧ (1746-48)
☛ ಫ್ರೆಂಚ್ ಗವರ್ನರ್ ಡೂಪ್ಲೆ ಮತ್ತು ಬ್ರಿಟಿಷರ ನಡುವೆ ನಡೆಯಿತು.
☛ ಬ್ರಿಟಿಷರು ಸೋತರು.
☛ ಏ ಲಾ ಚಾಪೆಲ್ ಒಪ್ಪಂದ ಮೂಲಕ ಯುದ್ಧ ಕೊನೆಗೊಂಡಿತು.
೨) ಎರಡನೇ ಕರ್ನಾಟಿಕ್ ಯುದ್ಧ (1749-1755)
☛ ಡೂಪ್ಲೆ ಮತ್ತು ರಾಬರ್ಟ್ ಕ್ಲೈವ್ ನಡುವೆ ನಡೆಯಿತು.
☛ ಡೂಪ್ಲೆ ಸೋಲನ್ನನುಭವಿಸಿದನು.
☛ ಪಾಂಡಿಚೇರಿ ಒಪ್ಪಂದ ಮೂಲಕ ಯುದ್ಧ ಕೊನೆಗೊಂಡಿತು.
೩) ಮೂರನೇ ಕರ್ನಾಟಿಕ್ ಯುದ್ಧ (1756-1763)
☛ ಕೌಂಟ್ ಡಿ ಲಾಲಿ ಮತ್ತು ರಾಬರ್ಟ್ ಕ್ಲೈವ್ ನಡುವೆ ನಡೆಯಿತು.
☛ ಫ್ರೆಂಚರು ಸೋತರು.
☛ ಪ್ಯಾರಿಸ್ ಶಾಂತಿ ಒಪ್ಪಂದ ಮೂಲಕ ಯುದ್ಧ ಕೊನೆಗೊಂಡಿತು.
☛ ಈ ಯುದ್ಧಗಳ ಪರಿಣಾಮವಾಗಿ ಫ್ರೆಂಚರು ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡರು.