🏛 ಕರ್ನಾಟಕವನ್ನಾಳಿದ ಪ್ರಮುಖ ರಾಜಮನೆತನಗಳು
೧) ಮೌರ್ಯರು
☛ ಅಶೋಕನ ಶಾಸನಗಳು ಕರ್ನಾಟಕದ 11 ಸ್ಥಳಗಳಲ್ಲಿ ದೊರೆತಿವೆ.
☛ ಚಂದ್ರಗುಪ್ತ ಮೌರ್ಯನು ಶ್ರವಣಬೆಳಗೊಳದಲ್ಲಿ ನೆಲೆಸಿದ್ದನು.
☛ ಪ್ರಮುಖ ಸ್ಥಳಗಳು : ಬ್ರಹ್ಮಗಿರಿ, ಮಾಸ್ಕಿ, ಸನ್ನತಿ.
೨) ಶಾತವಾಹನರು
☛ ರಾಜಧಾನಿ : ಪೈತಾನ್ ಅಥವಾ ಪ್ರತಿಷ್ಠಾನ.
☛ ಮೂಲ ಪುರುಷ : ಸಿಮುಖ.
☛ ಪ್ರಮುಖ ದೊರೆ : ಗೌತಮಿಪುತ್ರ ಶಾತಕರ್ಣಿ.
೩) ಕದಂಬರು
☛ ಸ್ಥಾಪಕ : ಮಯೂರವರ್ಮ.
☛ ರಾಜಧಾನಿ : ಬನವಾಸಿ.
☛ ಹಲ್ಮಿಡಿ ಶಾಸನ ಕನ್ನಡದ ಮೊದಲ ಶಾಸನ.
೪) ತಲಕಾಡಿನ ಗಂಗರು
☛ ಸ್ಥಾಪಕರು : ದಡಿಗ ಮತ್ತು ಮಾದವರು.
☛ ರಾಜಧಾನಿ : ಕುವಲಾಲ, ತಲಕಾಡು.
☛ ಪ್ರಸಿದ್ಧ ದೊರೆ : ದುರ್ವಿನೀತ.
೫) ಬಾದಾಮಿಯ ಚಾಲುಕ್ಯರು
☛ ರಾಜಧಾನಿ : ಬಾದಾಮಿ.
☛ ಪ್ರಮುಖ ದೊರೆ : ಇಮ್ಮಡಿ ಪುಲಕೇಶಿ.
☛ ಐಹೊಳೆ ದೇವಾಲಯಗಳು ಪ್ರಸಿದ್ಧ.
೬) ರಾಷ್ಟ್ರಕೂಟರು
☛ ಸ್ಥಾಪಕ : ದಂತಿದುರ್ಗ.
☛ ರಾಜಧಾನಿ : ಮಾನ್ಯಖೇಟ.
☛ ಪ್ರಸಿದ್ಧ ದೊರೆ : ಅಮೋಘವರ್ಷ ನೃಪತುಂಗ.
೭) ಕಲ್ಯಾಣಿ ಚಾಲುಕ್ಯರು
☛ ಸ್ಥಾಪಕ : ಇಮ್ಮಡಿ ತೈಲಪ.
☛ ರಾಜಧಾನಿ : ಕಲ್ಯಾಣ.
☛ ಪ್ರಮುಖ ದೊರೆ : 6ನೇ ವಿಕ್ರಮಾದಿತ್ಯ.
೮) ಕಲಚೂರಿಗಳು
☛ ಪ್ರಮುಖ ದೊರೆ : ಬಿಜ್ಜಳ.
☛ ಬಸವಣ್ಣ ಮಂತ್ರಿಯಾಗಿದ್ದರು.
೯) ಹೊಯ್ಸಳರು
☛ ರಾಜಧಾನಿ : ಹಳೇಬೀಡು.
☛ ಪ್ರಮುಖ ದೊರೆ : ವಿಷ್ಣುವರ್ಧನ.
☛ ಬೇಲೂರು ಮತ್ತು ಹಳೇಬೀಡು ದೇವಾಲಯಗಳು ಪ್ರಸಿದ್ಧ.
೧೦) ವಿಜಯನಗರ ಸಾಮ್ರಾಜ್ಯ
☛ ಸ್ಥಾಪಕರು : ಹಕ್ಕ-ಬುಕ್ಕ ಸಹೋದರರು.
☛ ರಾಜಧಾನಿ : ಹಂಪಿ.
☛ ಪ್ರಮುಖ ದೊರೆ : ಕೃಷ್ಣದೇವರಾಯ.
೧೧) ಬಹಮನಿ ಸಾಮ್ರಾಜ್ಯ
☛ ಸ್ಥಾಪಕ : ಅಲ್ಲಾವುದ್ದೀನ್ ಹಸನ್ ಬಹಮನ್ ಷಾ.
☛ ರಾಜಧಾನಿಗಳು : ಗುಲ್ಬರ್ಗಾ ಮತ್ತು ಬೀದರ್.