“ಒಂದು ಕಾಲದ ಕ್ರಿಯಾಪದವನ್ನು (ಭೂತಕಾಲ, ವರ್ತಮಾನ, ಭವಿಷ್ಯತ್) ಬಳಸುವ ಜಾಗದಲ್ಲಿ ಮತ್ತೊಂದು ಕಾಲದ ರೂಪಗಳನ್ನು ಬಳಸುವುದನ್ನು ಕಾಲ ಪಲ್ಲಟ ಅಥವಾ ಕಾಲ ಬದಲಾವಣೆ ಎನ್ನುವರು.”
📘 ಉದಾಹರಣೆ 1
ನಾನು ಮುಂದಿನ ವರ್ಷ ಬೆಂಗಳೂರಿಗೆ ಹೋಗುತ್ತೇನೆ.
ಮೇಲಿನ ವಾಕ್ಯದಲ್ಲಿ “ಹೋಗುತ್ತೇನೆ” ಎಂಬುದು ವರ್ತಮಾನ ಕಾಲದ ಕ್ರಿಯಾಪದವಾಗಿದೆ. ಇಲ್ಲಿ ಭವಿಷ್ಯತ್ ಕಾಲದ “ಹೋಗುವೆನು” ಎಂಬ ರೂಪ ಬಳಸಬೇಕಾಗಿತ್ತು. ಆದ್ದರಿಂದ ಇದು ಕಾಲ ಪಲ್ಲಟ ಆಗಿದೆ.
📘 ಉದಾಹರಣೆ 2
ನಿನ್ನೆ ನಾನು ಕೋಲಾರ ಹೋಗುವೆನು.
ಮೇಲಿನ ವಾಕ್ಯದಲ್ಲಿ “ಹೋಗಿದ್ದೆನು” ಎಂದು ಪ್ರಯೋಗವಾಗಬೇಕಾಗಿತ್ತು. ಅದರ ಬದಲು “ಹೋಗುವೆನು” ಎಂದು ಪ್ರಯೋಗವಾಗಿರುವುದರಿಂದ ಇದು ಕಾಲ ಪಲ್ಲಟ ಆಗಿದೆ.
📘 ಉದಾಹರಣೆ 3
ಈ ರಸ್ತೆ ಕೆ.ಜಿ.ಎಫ್ ಹೋಗುತ್ತದೆ.
ಈ ರಸ್ತೆ ಕೆ.ಜಿ.ಎಫ್ ಹೋಗುವುದು.