🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಅವ್ಯಯಗಳು

ಅವ್ಯಯಗಳು (Avyaya)

ಲಿಂಗ, ವಚನ, ವಿಭಕ್ತಿಗಳಿಂದ ರೂಪಾಂತರ ಹೊಂದದೆ ಏಕರೂಪವಾಗಿರುವ ಶಬ್ದಗಳು

ನಾಮ ಪ್ರಕೃತಿ ಮತ್ತು ಕ್ರಿಯಾ ಪ್ರಕೃತಿಗಳಂತೆ ಲಿಂಗ, ವಚನ, ಕಾಲಕ್ಕನುಗುಣವಾಗಿ ಯಾವ ರೂಪ ಬದಲಾವಣೆಯನ್ನು ಹೊಂದದೆ, ಯಾವಾಗಲೂ ಏಕರೂಪವಾಗಿರುವ ಶಬ್ದಗಳನ್ನೇ ಅವ್ಯಯಗಳು ಎನ್ನುತ್ತಾರೆ.

ಅವ್ಯಯಗಳ ಪ್ರಕಾರಗಳು

1. ಸಾಮಾನ್ಯ ಅವ್ಯಯಗಳು

ಯಾವುದಾದರೊಂದು ಕ್ರಿಯೆ ನಡೆದ ರೀತಿಯನ್ನು ಕ್ರಿಯಾ ವಿಶೇಷಣಗಳಾಗಿ ತಿಳಿಸುವ ಅವ್ಯಯಗಳು.

ಉದಾಹರಣೆ: ಸುಮ್ಮನೆ, ಬೇಗನೆ, ತಟ್ಟನೆ, ಚೆನ್ನಾಗಿ, ನೆಟ್ಟಗೆ.

2. ಅನುಕರಣ ಅವ್ಯಯಗಳು

ಅರ್ಥವಿಲ್ಲದ ಧ್ವನಿ ವಿಶೇಷಗಳನ್ನು ಮತ್ತೆ ಮತ್ತೆ ಅನುಕರಿಸಿ ಹೇಳುವುದು.

ಉದಾಹರಣೆ: ರಪ ರಪ, ಗುಡುಗುಡು, ಸರ ಸರ, ಚುರು ಚುರು, ಘಮ ಘಮ.

3. ಕ್ರಿಯಾರ್ಥಕ ಅವ್ಯಯಗಳು

ಕ್ರಿಯಾಪದದ ಸ್ಥಾನದಲ್ಲಿದ್ದು ಕ್ರಿಯೆಯ ಅರ್ಥವನ್ನು ಪೂರ್ಣಗೊಳಿಸುವ ಅವ್ಯಯಗಳು.

ಉದಾಹರಣೆ: ಹೌದು, ಇಲ್ಲ, ಬೇಡ, ಸಾಕು, ಉಂಟು.

4. ಭಾವಸೂಚಕ ಅವ್ಯಯಗಳು

ಮನಸ್ಸಿನ ಹರ್ಷ, ಸಂಭ್ರಮ, ಗಾಬರಿ, ತಿರಸ್ಕಾರ ಮುಂತಾದ ಭಾವನೆಗಳನ್ನು ಅಭಿವ್ಯಕ್ತಿಸುವ ಅರ್ಥವಿಲ್ಲದ ಪದಗಳು.

ಉದಾಹರಣೆ: ಅಹಾ!, ಅಬ್ಬಾ!, ಛೇ!, ಥೂ, ಭಲೇ!, ಶಬ್ಭಾಷ್.

5. ಸಂಬಂಧ ಸೂಚಕ ಅವ್ಯಯಗಳು

ಎರಡು ಪದಗಳನ್ನು ಅಥವಾ ಎರಡು ವಾಕ್ಯಗಳನ್ನು ಜೋಡಿಸುವ ಶಬ್ದಗಳು.

ಉದಾಹರಣೆ: ಆದರೆ, ಮತ್ತು, ಹಾಗೂ, ಅಥವಾ, ಆದ್ದರಿಂದ.

6. ಅವಧಾರಣಾರ್ಥಕ ಅವ್ಯಯಗಳು

ಒಂದು ನಿಶ್ಚಿತ ಭಾವವನ್ನು ಒತ್ತಿ ಹೇಳುವುದಕ್ಕಾಗಿ "ಏ" ಸ್ವರವನ್ನು ಪಡೆದುಕೊಂಡ ಪದಗಳು.

ಉದಾಹರಣೆ: ನೀವೇ, ರಾಮನೇ, ಕಾಯಕವೇ, ನನ್ನದೇ.

ಇತರ ಪ್ರಕಾರಗಳು

  • 7. ಕೃದಂತ ಅವ್ಯಯ: ಧಾತುಗಳಿಗೆ ಕೃತ್ ಪ್ರತ್ಯಯಗಳು ಸೇರಿದಾಗ ಸಿದ್ಧವಾಗುವ ಅವ್ಯಯಗಳು.
  • 8. ತದ್ಧಿತಾಂತ ಅವ್ಯಯ: ನಾಮಪದಗಳಿಗೆ ತದ್ಧಿತ ಪ್ರತ್ಯಯಗಳು ಸೇರಿದಾಗ ಸಿದ್ಧವಾಗುವ ಅವ್ಯಯಗಳು.
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive