🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಮೌಲ್ಯಾಂಕನ ವೇಳಾಪಟ್ಟಿ (1 ರಿಂದ 9ನೇ ತರಗತಿ) ​
📚 ​FA-1: ದಿನಾಂಕ 28-07-2026 ರಿಂದ 30-07-2026 ​
📚 ​​FA-2: ದಿನಾಂಕ 27-08-2026 ರಿಂದ 31-08-2026 ​
📚​ SA-1: ದಿನಾಂಕ 23-09-2026 ರಿಂದ 30-09-2026 ​
📚 ​​FA-3: ದಿನಾಂಕ 17-12-2026 ರಿಂದ 19-12-2026 ​
📚 ​FA-4: ದಿನಾಂಕ 08-02-2027 ರಿಂದ 10-02-2027 ​
📚 ​​SA-2: ದಿನಾಂಕ 15-03-2027 ರಿಂದ 20-03-2027 ​
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
👨‍🏫 TET RESOURCES PDFs 🧑‍🍼 1ನೇ ಪ್ರವೇಶ ವಯಸ್ಸಿನ ಕ್ಯಾಲ್ಕುಲೇಟರ್ 📚🖊️ JOYFUL LEARNING 🏆 ಸೇತುಬಂಧ 📙 ಶಾಲಾ ದಾಖಲೆಗಳು 🍛 ಮಧ್ಯಾಹ್ನ ಊಟದ ಲೆಕ್ಕಾಚಾರ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರದೊಂದಿಗೆ 📝 ಶಾಲಾ ದಾಖಲಾತಿ ನಮೂನೆ ಭಾವಚಿತ್ರ ಇಲ್ಲದೆ 📄 ಶಾಲಾ ದಾಖಲಾತಿ ದೃಢೀಕರಣ ಪತ್ರ 📋 1ST STANDARD APPLICATION FORM 🎓 Student Admission (1-12) Form 2026 📑 Documents Required For Admission 📢 ಶಾಲಾ ದಾಖಲಾತಿ ಪ್ರಕಟಣೆ 2026-27 📜 ಶಾಲಾ ದಾಖಲಾತಿ ದೃಢೀಕರಣ ಪತ್ರ 📚 ಶಾಲಾ ದಾಖಲಾತಿ ರಿಜಿಸ್ಟರ್ - ನಕಲು 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 4-5 📊 ಪಾಠಾಧಾರಿತ ಮೌಲ್ಯಮಾಪನ 2026-27 ಶಿಕ್ಷಕರ ವೈಯಕ್ತಿಕ ಅಂಕ ವಹಿ 6-10 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE LPS 1-5 ನಮೂನೆ 📘 ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ CCE HPS 6-10 ನಮೂನೆ 🧮 CCE ಗ್ರೇಡ್ ಅಂಕ ಪರಿವರ್ತನೆ ಕ್ಯಾಲ್ಕುಲೇಟರ್ 🧮 CCE ಗ್ರೇಡ್ ಕ್ಯಾಲ್ಕುಲೇಟರ್ ಮತ್ತು ಕೋಷ್ಟಕ 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 1-5 📋 FA ಮೌಲ್ಯಮಾಪನ ವೈಯಕ್ತಿಕ ಅಂಕವಹಿ 6-8 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ LPS 📚 ಪಾಠ ಆಧಾರಿತ ಮೌಲ್ಯಮಾಪನ LBA ವಿದ್ಯಾರ್ಥಿಗಳ ವೈಯಕ್ತಿಕ ಅಂಕಗಳ ವಹಿ HPS 🏅 ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ 📜 ಕನ್ನಡ ಮಾಧ್ಯಮ ಪ್ರಮಾಣ ಪತ್ರ ಅನುಬಂಧ 01 📜 ನಡತೆಯ ಪ್ರಮಾಣ ಪತ್ರ - CHARACTER CERTIFICATE 👨‍🏫 ಶಿಕ್ಷಕರ ಸೇವಾ ಪ್ರಮಾಣ ಪತ್ರ 💰 ಅಂತಿಮ ವೇತನ ಸಂದಾಯ ಪ್ರಮಾಣ ಪತ್ರ 📄 School Transfer Certificate / ಶಾಲಾ ವರ್ಗಾವಣೆ ಪ್ರಮಾಣ ಪತ್ರ 📑 12 ಅನುದಾನ ಬಳಕೆಯ ಉಪಯೋಗಿತಾ ಪ್ರಮಾಣ ಪತ್ರಗಳು 📜 ಉಪಯೋಗಿತಾ ಪ್ರಮಾಣ ಪತ್ರ 🏆 Sports Certificate of Eligibility 🏖️ LOCAL HOLIDAY REQUEST LETTER 📝 ರಜಾ ಪತ್ರದ ಅರ್ಜಿ 📝 EL ರಜಾ ಅರ್ಜಿ ಪ್ರಪತ್ರ 👶 Application for Child Care Leave KANNADA & ENGLISH 👩‍🏫 ಶಿಶುಪಾಲನಾ ರಜೆ ಮಂಜೂರಾತಿ ಚೆಕ್ಲಿಸ್ಟ್ 🏫 ಶಾಲಾ ಸಂಘಗಳು 2026-27 🏫 ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ 🏛️ ಶಾಲಾ ಸಂಸತ್ತು 📢 SDMC Meeting Notice 👥 ನೂತನ ಎಸ್.ಡಿ.ಎಂ.ಸಿ. ಸದಸ್ಯರ ಪಟ್ಟಿ 🕐 TIME TABLE 1 TO 5TH CLASS EDITABLE 🕐 TIME TABLE 6th TO 10th CLASS EDITABLE 📅 ಶಾಲಾ ವಾರ್ಷಿಕ ಕ್ರಿಯಾ ಯೋಜನೆ 2026-27 🗓️ ಶಾಲಾ ಪಂಚಾಂಗ 2026-27 📋 ದತ್ತು ಶಾಲೆಗಳ ಕ್ರಿಯಾ ಯೋಜನೆ ⚽ ಕ್ರೀಡಾಕೂಟದಲ್ಲಿ ಭಾಗವಹಿಸಲು ಪಾಲಕರ ಒಪ್ಪಿಗೆ ಪತ್ರ 🏅 ಕ್ರೀಡಾಕೂಟ ಸ್ಕೋರ್ ಶೀಟ್ಗಳು ಮತ್ತು ದಾಖಲೆ ಹಾಳೆಗಳು 🏃 ಕ್ರೀಡಾಕೂಟ ಪ್ರವೇಶ ಪಟ್ಟಿ Sports Entry Form 2026-27 🏆 ವಿದ್ಯಾರ್ಥಿ ಕ್ರೀಡಾ ನಿಧಿ SSF ಹಾಗೂ ಕ್ರೀಡಾ ವಂತಿಗೆ 🎭 ಪ್ರತಿಭಾ ಕಾರಂಜಿ ನಮೂನೆಗಳು 🍛 ಅಕ್ಷರ ದಾಸೋಹದ ದೈನಂದಿನ ಲೆಕ್ಕಾಚಾರ ONLINE 🥚 ಮೊಟ್ಟೆ ಅಥವಾ ಬಾಳೆಹಣ್ಣು ಸೇವಿಸಲು ಒಪ್ಪಿಗೆ ಪತ್ರ 🥕 ತರಕಾರಿ ಸಾದಿಲ್ವಾರು ಪಾವತಿ 👩‍🍳 ಅಡುಗೆ ಸಿಬ್ಬಂದಿ ಇಡಿಗಂಟು ನಮೂನೆಗಳು 💰 ಹಣ ಸಂದಾಯ ರಸೀದಿ 📄 FORM-16 & COMPUTATION 🏥 ವೈದ್ಯಕೀಯ ವೆಚ್ಚ ಮರುಪಾವತಿ ಅರ್ಜಿ 🔄 ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿ ಮನವಿ 🧒 ಮಕ್ಕಳ ವಲಸೆ ಚೀಟಿ / Child Migration Card 👨‍🏫 ಶಿಕ್ಷಕರ ಮಾಹಿತಿ ನಮೂನೆ 2026 📋 ಅನುಕಂಪದ ಆಧಾರದ ನೇಮಕಾತಿ ನಮೂನೆಗಳು 1 ಮತ್ತು 2 📜 ನಾಮನಿರ್ದೇಶನ ಪತ್ರಗಳು 📋 ಶಾಲಾ ಚಾರ್ಜ್ ಪಟ್ಟಿ 🪪 Student Identity Card 📊 ಮಕ್ಕಳ ಜಾತಿವಾರು ಘೋಷ್ವಾರೆ ನಮೂನೆ 📚 ವಿದ್ಯಾರ್ಥಿ ಕೃತಿ ಸಂಪುಟ Child Portfolio 📈 ವಾರ್ಷಿಕ ಕಾರ್ಯನಿರ್ವಹಣಾ ವರದಿ CR 👨‍🏫 HM LESSON OBSERVATION FORMAT ✅ ಪ್ರತಿ ದಿನ ಶಾಲಾ ಮುಖ್ಯ ಶಿಕ್ಷಕರು ಪರಿಶೀಲಿಸಬೇಕಾದ ಪ್ರಾಥಮಿಕ ಅಂಶಗಳು 🛠️ ಶಾಲಾ ದಾಖಲೆಗಳ ಮುಖಪುಟ Generator
🕊️
🕊️
Loading...
OPEN
⏳
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Tuesday, August 18, 2026

ಶಿಕ್ಷಕರ ನೇಮಕಾತಿಯಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು (FAQ)

ಶಿಕ್ಷಕರ ನೇಮಕಾತಿ FAQ - 2026-27 | ಶಾಲಾ ಶಿಕ್ಷಣ ಇಲಾಖೆ

ಶಾಲಾ ಶಿಕ್ಷಣ ಇಲಾಖೆ

ಕೇಂದ್ರೀಕೃತ ದಾಖಲಾತಿ ಘಟಕ, ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಕೆ.ಜಿ. ರಸ್ತೆ, ಬೆಂಗಳೂರು-09

ಪದೇ ಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳು (FAQ)

2026-27ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕ –ಸಾಮಾನ್ಯ (1 ರಿಂದ 5 ನೇ ತರಗತಿ), ಸರ್ಕಾರಿ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-II (1 ರಿಂದ 8ನೇ ತರಗತಿ) ವೃಂದದ ಹುದ್ದೆಗಳಿಗೆ ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8 ನೇ ತರಗತಿ) ವೃಂದದ ಹುದ್ದೆಗಳಿಗೆ ಹಾಗೂ ಗಣಕ ವಿಜ್ಞಾನ ಶಿಕ್ಷಕರ (1 ರಿಂದ 8ನೇ ತರಗತಿ) ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ರಾಜ್ಯದ ಆಯಾ ಜಿಲ್ಲಾವಾರು ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅದೇ ರೀತಿಯಾಗಿ ಶಿಕ್ಷಣ ಇಲಾಖೆಯ ಆಯಾ ವಿಭಾಗೀಯ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಪ್ರೌಢಶಾಲಾ ಸಹ ಶಿಕ್ಷಕರು (ಕನ್ನಡ ಭಾಷೆ, ಆಂಗ್ಲ ಭಾಷೆ, ಕಲಾ (ಕನ್ನಡ/ಇಂಗ್ಲಿಷ್), ಜೀವ ವಿಜ್ಞಾನ (ಕನ್ನಡ/ಇಂಗ್ಲಿಷ್) ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಗ್ರೇಡ್-1 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ವಿಭಾಗ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ ರಾಜ್ಯದ ಆಯಾ ವಿಭಾಗವಾರು ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು, ಅರ್ಹರಾಗಿರುವ ಅಭ್ಯರ್ಥಿಗಳಿಂದ ನಿಗದಿಪಡಿಸಿರುವ ಆನ್‌ಲೈನ್ ಮೂಲಕ ಅರ್ಜಿಗಳನ್ನು ಕರೆಯಲಾಗಿದೆ.

ನೇಮಕಾತಿ ಅಧಿಸೂಚನೆಯಲ್ಲಿ ಎಲ್ಲಾ ಮಾಹಿತಿಯನ್ನು ವಿವರವಾಗಿ ನೀಡಿದ್ದು, ಅಧಿಸೂಚನೆಯಲ್ಲಿ ನೀಡಿರುವ ಅಂಶಗಳೇ ಅಂತಿಮವಾಗಿದ್ದು, ಅಭ್ಯರ್ಥಿಗಳು ಅಧಿಸೂಚನೆಯನ್ನು ಕೂಲಂಕಷವಾಗಿ ಓದಿ ಅರ್ಥೈಸಿಕೊಳ್ಳುವುದು. ಅಧಿಸೂಚನೆಯಲ್ಲಿನ ಅಂಶಗಳನ್ನು ಸರಳೀಕರಣ ಮಾಡಿ ಅಭ್ಯರ್ಥಿಗಳಿಗೆ ಉದ್ಭವಿಸಿರುವ ಅಥವಾ ಉದ್ಭವಿಸಬಹುದಾದ ಪ್ರಶ್ನೆಗಳಿಗೆ ಉತ್ತರ ನೀಡುವ ಒಂದು ಪ್ರಯತ್ನದ ಭಾಗವಾಗಿ, ಪದೇ ಪದೇ ಕೇಳಲಾಗಿರುವ ಪ್ರಶ್ನೆಗಳಿಗೆ ಈ ಕೆಳಕಂಡಂತೆ ಉತ್ತರಿಸಲಾಗಿದೆ.

🌐 1. ಆನ್ ಲೈನ್ ಅರ್ಜಿಗೆ ಸಂಬಂಧಿಸಿದಂತೆ
01 Online ಅರ್ಜಿ ಸಲ್ಲಿಸಲು ಪ್ರಾರಂಭದ ಮತ್ತು ಕೊನೆಯ ದಿನಾಂಕ:
ಉತ್ತರ Online ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 18/08/2026
Online ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 15/09/2026
02 ಅಭ್ಯರ್ಥಿಗಳು ಅರ್ಜಿಯೊಂದಿಗೆ ಯಾವ ಯಾವ ದಾಖಲೆಗಳನ್ನು Upload ಮಾಡಬೇಕು?
ಉತ್ತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಾನ್ ಕ್ರೀಮಿ ಲೇಯರ್, 371ಜೆ ಮೀಸಲಾತಿ ಪ್ರಮಾಣ ಪತ್ರ ಹೊರತುಪಡಿಸಿ, ಉಳಿದಂತೆ ಸಮತಲ ಮೀಸಲಾತಿಗೆ ಸಂಬಂಧಿಸಿದಂತೆ ಎಲ್ಲಾ ಪ್ರಮಾಣ ಪತ್ರಗಳನ್ನು Upload ಮಾಡಬೇಕಿರುತ್ತದೆ.
📜 2. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ
03 ನನ್ನ ಬಳಿ ಇರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ವ್ಯಾಸಂಗಕ್ಕಾಗಿ ಎಂದು ನಮೂದಿಸಲಾಗಿದೆ. ಸದರಿ ಪ್ರಮಾಣ ಪತ್ರವನ್ನು ನೇಮಕಾತಿಗೆ ಸಲ್ಲಿಸಬಹುದೇ?
ಉತ್ತರ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ವ್ಯಾಸಂಗಕ್ಕಾಗಿ ಎಂದು ನಮೂದಿಸಿದ್ದಲ್ಲಿ, ಪರಿಗಣಿಸುವುದಿಲ್ಲ. ವ್ಯಾಸಂಗಕ್ಕಾಗಿ ಅಥವಾ ಉದ್ಯೋಗಕ್ಕಾಗಿ ಎಂದು ನಮೂದಿಸದೇ ಇರುವ ಪ್ರಮಾಣ ಪತ್ರ ಸಲ್ಲಿಸಬಹುದು ಅಥವಾ ಉದ್ಯೋಗಕ್ಕಾಗಿ ಎಂದು ನಮೂದಿಸಿರುವ ಪ್ರಮಾಣ ಪತ್ರ ಸಲ್ಲಿಸಬಹುದು. ಅಭ್ಯರ್ಥಿಯು ನೇಮಕಾತಿ ಹೊಂದಿದ್ದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಸಿಂಧುತ್ವ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ.
04 ನೇಮಕಾತಿಗೆ ಜಾತಿ ಮತ್ತು ಆದಾಯದ ಮೀಸಲಾತಿ ಕೋರಿ, ಮುಖ್ಯ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದಲ್ಲಿ (GM) ನಲ್ಲಿ ಆಯ್ಕೆಯಾದರೂ ಸಿಂಧುತ್ವ ಸಲ್ಲಿಸಬೇಕೇ?
ಉತ್ತರ ನೇಮಕಾತಿಗೆ ಜಾತಿ ಮತ್ತು ಆದಾಯದ ಮೀಸಲಾತಿ ಕೋರಿ, ಮುಖ್ಯ ಆಯ್ಕೆ ಪಟ್ಟಿಯಲ್ಲಿ ಸಾಮಾನ್ಯ ವರ್ಗದಲ್ಲಿ (GM) ನಲ್ಲಿ ಆಯ್ಕೆಯಾದರೂ ಅಥವಾ ಪ್ರವರ್ಗದ ಮೀಸಲಾತಿಯಡಿ ಆಯ್ಕೆಯಾದರೂ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕಿರುತ್ತದೆ. ಜಾತಿ ಮತ್ತು ಆದಾಯ ಮೀಸಲಾತಿ ಪ್ರಮಾಣ ಪತ್ರದ ಸಿಂಧುತ್ವ ರದ್ದಾದಲ್ಲಿ ಉತ್ತಮ ಮೆರಿಟ್ ಇದ್ದರೂ ಸಹ ನೇಮಕಾತಿ ರದ್ದಾಗುತ್ತದೆ.
05 ನಾನು ಪರಿಶಿಷ್ಟ ಜಾತಿಯ ಅಭ್ಯರ್ಥಿಯಾಗಿದ್ದು, ನಿಗದಿತ ನಮೂನೆ- ಡಿ ಯಲ್ಲಿ ಪ್ರವರ್ಗ-ಎ, ಪ್ರವರ್ಗ-ಬಿ, ಪ್ರವರ್ಗ-ಸಿ ಎಂದು ನಮೂದಿಸದ ಜಾತಿ ಪ್ರಮಾಣ ಪತ್ರವನ್ನು ಹೊಂದಿದ್ದು, ಸದರಿ ಪ್ರಮಾಣ ಪತ್ರವನ್ನೇ ಸಲ್ಲಿಸಬಹುದೇ? ಅಥವಾ ಪ್ರವರ್ಗ-ಎ, ಪ್ರವರ್ಗ-ಬಿ, ಪ್ರವರ್ಗ-ಸಿ ಎಂದು ನಮೂದಿಸಿರುವ ಪ್ರಮಾಣ ಪತ್ರ ಸಲ್ಲಿಸಬೇಕೇ?
ಉತ್ತರ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ನಮೂನೆ ʼಡಿʼ ಯಲ್ಲಿ (ಪ್ರವರ್ಗ-ಎ, ಪ್ರವರ್ಗ-ಬಿ, ಪ್ರವರ್ಗ-ಸಿ ಎಂಬುದಾಗಿ ನಮೂದಿಸಿದ ಜಾತಿ ಪ್ರಮಾಣ ಪತ್ರವನ್ನು ಪಡೆದಿರುವುದು ಕಡ್ಡಾಯವಾಗಿರುತ್ತದೆ.
06 ನನಗೆ ವ್ಯಾಸಂಗದ ಉದ್ದೇಶಕ್ಕಾಗಿ 2A, ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಿರುತ್ತಾರೆ. ಆದರೆ ಉದ್ಯೋಗಕ್ಕಾಗಿ 3A ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲಾಗಿರುತ್ತದೆ. ನಾನು ಯಾವುದನ್ನು ಸಲ್ಲಿಸಬಹುದು?
ಉತ್ತರ ಕೆಲವು ಜಾತಿಗಳಿಗೆ ವ್ಯಾಸಂಗದ ಉದ್ದೇಶಕ್ಕಾಗಿ 2A, ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡಲಾಗಿರುತ್ತದೆ. ಆದರೆ ಸಕ್ಷಮ ಪ್ರಾಧಿಕಾರದಿಂದ ಉದ್ಯೋಗಕ್ಕಾಗಿ ನೀಡಿರುವ 3A ಪ್ರವರ್ಗದಡಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನೇ ಸಲ್ಲಿಸುವುದು.
🏛️ 3. ಕಲ್ಯಾಣ ಕರ್ನಾಟಕ ವ್ಯಾಪ್ತಿಯ 371ಜೆ ಮೀಸಲಾತಿಗೆ ಸಂಬಂಧಿಸಿದಂತೆ
07 ನಾನು ಕಲ್ಯಾಣ ಕರ್ನಾಟಕ ವ್ಯಾಪ್ತಿಯ ನಿವಾಸಿಯಾಗಿದ್ದು, ಸಕ್ಷಮ ಪ್ರಾಧಿಕಾರವು ನೀಡಿರುವ 371ಜೆ ಪ್ರಮಾಣ ಪತ್ರವನ್ನು ಹೊಂದಿದ್ದು, ಆದರೆ RD ನಂಬರ್ ಇರುವುದಿಲ್ಲ. ಸದರಿ ಪ್ರಮಾಣ ಪತ್ರವನ್ನು ನೇಮಕಾತಿಗೆ ಸಲ್ಲಿಸಬಹುದೇ?
ಉತ್ತರ ಸಕ್ಷಮ ಪ್ರಾಧಿಕಾರದಿಂದ ನೀಡಿರುವ ಹಾಗೂ RD ನಂಬರ್ ಹೊಂದಿರುವ 371ಜೆ ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
08 HK ಸರ್ಟಿಫಿಕೇಟ್ ಇದೆ. ಆದರೆ ನಾನು ವಿವಾಹವಾಗಿ Non-HK ಜಿಲ್ಲೆಯ ನಿವಾಸಿಯಾಗಿರುತ್ತೇನೆ. ನಾನು 371ಜೆ ಮೀಸಲಾತಿಯಡಿ ಅರ್ಜಿ ಸಲ್ಲಿಸಬಹುದೇ?
ಉತ್ತರ ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ (RD ನಂಬರ್ ಹೊಂದಿರುವ) 371ಜೆ ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸಿ, 371ಜೆ ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಬಹುದು.
09 ನಾನು 371ಜೆ ಮೀಸಲಾತಿಯ ಅಭ್ಯರ್ಥಿಯಾಗಿದ್ದು, ನಾನು ಕಲ್ಯಾಣ ಕರ್ನಾಟಕೇತರ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬಹುದೇ?
ಉತ್ತರ ಅರ್ಜಿ ಸಲ್ಲಿಸಬಹುದು.
10 ನಾನು 371ಜೆ ಮೀಸಲಾತಿಯ ಅಭ್ಯರ್ಥಿಯಾಗಿದ್ದು, ನಾನು ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಶೇ.20ರಷ್ಟು ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದೇ?
ಉತ್ತರ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.
11 ನಾನು Non-KK ಅಭ್ಯರ್ಥಿಯಾಗಿದ್ದು, ಕಲ್ಯಾಣ ಕರ್ನಾಟಕದ ಮಿಕ್ಕುಳಿದ ವೃಂದದ ಶೇ.20 ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ ಹೌದು, ಕಲ್ಯಾಣ ಕರ್ನಾಟಕದ ಪ್ರದೇಶ ವ್ಯಾಪ್ತಿಯಲ್ಲಿನ ಶೇ.20 ರಷ್ಟು ಮಿಕ್ಕುಳಿದ ವೃಂದದ (RPC) ಹುದ್ದೆಗಳಿಗೆ, GBA ವ್ಯಾಪ್ತಿಯ ಬೆಂಗಳೂರು ಕೇಂದ್ರ ಜಿಲ್ಲೆ ಮತ್ತು ಬೆಂಗಳೂರು ಉತ್ತರ ಜಿಲ್ಲೆ ಇಲ್ಲಿನ ಶೇ.92 ರಷ್ಟು ಹುದ್ದೆಗಳಿಗೆ ಹಾಗೂ (GBA ವ್ಯಾಪ್ತಿಯ 02 ಜಿಲ್ಲೆಗಳು ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ 07 ಜಿಲ್ಲೆಗಳನ್ನು ಹೊರತುಪಡಿಸಿದ) ರಾಜ್ಯದ ಉಳಿದ 26 ಜಿಲ್ಲೆಗಳಲ್ಲಿ ಶೇ.100ರಷ್ಟು ಹುದ್ದೆಗಳಿಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಪರೀಕ್ಷೆ ನಡೆಯಲಿದೆ. ಈ ಹುದ್ದೆಗಳಿಗೆ ರಾಜ್ಯದ ಯಾವ ಜಿಲ್ಲೆಯ ಅಭ್ಯರ್ಥಿಗಳಾದರೂ ಅರ್ಜಿ ಸಲ್ಲಿಸಬಹುದು.
12 ನಾನು 371ಜೆ ಮೀಸಲಾತಿಯ ಅಭ್ಯರ್ಥಿಯಾಗಿದ್ದು, ನಾನು GBA ವ್ಯಾಪ್ತಿಯ ಬೆಂಗಳೂರು ಕೇಂದ್ರ ಜಿಲ್ಲೆ ಮತ್ತು ಬೆಂಗಳೂರು ಉತ್ತರ ಜಿಲ್ಲೆಗಳಲ್ಲಿ ಶೇ.8ರಷ್ಟು ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದೇ?
ಉತ್ತರ ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.
13 ನಾನು 371ಜೆ ಮೀಸಲಾತಿ ಹೊಂದಿದ್ದು, PSTR, GPTR ಮತ್ತು HSTR ಹುದ್ದೆಗೆ Non-KK ಮತ್ತು KK ಅರ್ಜಿ ಸಲ್ಲಿಸಬಹುದಾ?
ಉತ್ತರ ಅಭ್ಯರ್ಥಿಯು 371ಜೆ ಮೀಸಲಾತಿ ಪ್ರಮಾಣ ಪತ್ರ ಹೊಂದಿದ್ದಲ್ಲಿ KK ಮತ್ತು Non-KK ಹುದ್ದೆ ಎರಡಕ್ಕೂ ಅರ್ಜಿ ಸಲ್ಲಿಸಬಹುದಾಗಿದೆ.
14 ನಾನು 371ಜೆ ಮೀಸಲಾತಿ ಹೊಂದಿದ್ದು, PSTR, ಮತ್ತು GPTR ಹುದ್ದೆಗೆ ಕಲಬುರಗಿ ಜಿಲ್ಲೆಯಲ್ಲಿ KK ಮತ್ತು Non-KK ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾ?
ಉತ್ತರ ಸಲ್ಲಿಸಬಹುದು.
15 371ಜೆ ಮೀಸಲಾತಿಯ ಪ್ರಮಾಣ ಪತ್ರದಲ್ಲಿ ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ ಎಂದಿದೆ, ಸದರಿ ಪ್ರಮಾಣ ಪತ್ರವನ್ನು 371ಜೆ ಮೀಸಲಾತಿಗೆ ಪರಿಗಣಿಸುವಿರಾ?
ಉತ್ತರ 371ಜೆ ಮೀಸಲಾತಿಯ ಪ್ರಮಾಣ ಪತ್ರದಲ್ಲಿ ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ ಎಂದಿರುವುದರಿಂದ ಪರಿಗಣಿಸಲಾಗುವುದು.
🌾 4. ಗ್ರಾಮೀಣ ಮೀಸಲಾತಿ ಕುರಿತು
16 ನಾನು ಸಾಮಾನ್ಯ ಅಭ್ಯರ್ಥಿಯಾಗಿದ್ದು (GM) Creamy layer ವ್ಯಾಪ್ತಿಗೆ (ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕೂ ಹೆಚ್ಚಿದೆ) ಒಳಪಡುತ್ತೇನೆ. ನಾನು ಗ್ರಾಮೀಣ ಮೀಸಲಾತಿ ಕೋರಬಹುದೇ?
ಉತ್ತರ ಗ್ರಾಮೀಣ ಮೀಸಲಾತಿಗೆ ಕೆನೆ ಪದರ ನೀತಿ (Creamy layer Policy) ಅನ್ವಯಿಸುವುದರಿಂದ ಗ್ರಾಮೀಣ ಮೀಸಲಾತಿ ಕ್ಲೇಮು ಮಾಡಲು ಬರುವುದಿಲ್ಲ.
17 ನಾನು ಸಾಮಾನ್ಯ ಅಭ್ಯರ್ಥಿಯಾಗಿದ್ದು (GM) Creamy layer ವ್ಯಾಪ್ತಿಗೆ (ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕೂ ಕಡಿಮೆ ಇದೆ.) ಒಳಪಡುತ್ತೇನೆ. ನಾನು ಗ್ರಾಮೀಣ ಮೀಸಲಾತಿ ಕೋರಬಹುದೇ?
ಉತ್ತರ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಯು ಅವರ ಕುಟುಂಬದ ಆದಾಯ ರೂ.8.00 ಲಕ್ಷಕ್ಕೂ ಕಡಿಮೆ ಇದ್ದಲ್ಲಿ, ಮೇಲುಸ್ತರಕ್ಕೆ ಸೇರದಿರುವ ಬಗ್ಗೆ [Non-creamy layer certificate] ನಮೂನೆ-1ರಲ್ಲಿ RD ನಂಬರ್ ಹೊಂದಿರುವ ಪ್ರಮಾಣ ಪತ್ರವನ್ನು ತಹಶೀಲ್ದಾರರಿಂದ ಪಡೆದು ಸಲ್ಲಿಸಬೇಕು.
18 ನಾನು ಹಿಂದುಳಿದ ವರ್ಗಗಳಿಗೆ ಸೇರಿದ (2A, 2B, 3A, ಮತ್ತು 3B) ಅಭ್ಯರ್ಥಿಯಾಗಿದ್ದು, ಕುಟುಂಬದ ವಾರ್ಷಿಕ ಆದಾಯ ರೂ. 8.00 ಲಕ್ಷಕ್ಕೂ ಹೆಚ್ಚಿದೆ, ನಾನು ಗ್ರಾಮೀಣ ಮೀಸಲಾತಿ ಕೋರಬಹುದೇ?
ಉತ್ತರ ಗ್ರಾಮೀಣ ಮೀಸಲಾತಿಗೆ ಕೆನೆ ಪದರ ನೀತಿ (Creamy layer Policy) ಅನ್ವಯಿಸುವುದರಿಂದ ಗ್ರಾಮೀಣ ಮೀಸಲಾತಿ ಕ್ಲೇಮು ಮಾಡಲು ಬರುವುದಿಲ್ಲ.
19 ನಾನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ /ಪ್ರವರ್ಗ-Iರ ಅಭ್ಯರ್ಥಿಯಾಗಿದ್ದು ನನಗೆ Creamy layer ನೀತಿ ಅನ್ವಯಿಸುತ್ತದೆಯೇ? ಗ್ರಾಮೀಣ ಮೀಸಲಾತಿ ಕೋರಬಹುದೇ?
ಉತ್ತರ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ /ಪ್ರವರ್ಗ-Iರ ಅಭ್ಯರ್ಥಿಗಳಿಗೆ ಆದಾಯದ ಮಿತಿ ನಿಗದಿಪಡಿಸಿರುವುದಿಲ್ಲವಾದ್ದರಿಂದ ಗ್ರಾಮೀಣ ಮೀಸಲಾತಿ ಕೋರಿದ ಅಭ್ಯರ್ಥಿಗಳಿಗೆ Creamy layer ನೀತಿ ಅನ್ವಯಿಸುವುದಿಲ್ಲ.
20 ನಾನು ಸಾಮಾನ್ಯ ವರ್ಗ (GM) ಅಭ್ಯರ್ಥಿಯಾಗಿದ್ದು, ವಾರ್ಷಿಕ ರೂ.8.00 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿ, ಕೆನೆ ಪದರ ಮಿತಿಗೆ ಒಳಪಡುತ್ತೇನೆ (Creamy layer). ಗ್ರಾಮೀಣ ಮೀಸಲಾತಿ ಹೊರತುಪಡಿಸಿ, ಉಳಿದಂತೆ ಸಮತಲ ಮೀಸಲಾತಿಯಾದ ಮಾಜಿ ಸೈನಿಕ, ಕನ್ನಡ ಮಾಧ್ಯಮ, ಅಂಗವೈಕಲ್ಯ, ಯೋಜನಾ ನಿರಾಶ್ರಿತ, ತೃತೀಯ ಲಿಂಗಿ, ಮೀಸಲಾತಿ ಕೋರಬಹುದೇ?
ಉತ್ತರ ವಾರ್ಷಿಕ ರೂ.8.00 ಲಕ್ಷಕ್ಕೂ ಹೆಚ್ಚು ಆದಾಯ ಹೊಂದಿ, ಕೆನೆ ಪದರ ಮಿತಿಗೆ (Creamy layer) ಒಳಪಡುವ ಸಾಮಾನ್ಯ ವರ್ಗ (GM)ಕ್ಕೆ ಸೇರುವ ಅಭ್ಯರ್ಥಿಗಳು, ಗ್ರಾಮೀಣ ಮೀಸಲಾತಿ (ಕೆನೆಪದರ ನೀತಿ ಅನ್ವಯಿಸುವುದರಿಂದ) ಹೊರತುಪಡಿಸಿ, ಉಳಿದಂತೆ ಸಮತಲ ಮೀಸಲಾತಿಯಾದ ಮಾಜಿ ಸೈನಿಕ, ಕನ್ನಡ ಮಾಧ್ಯಮ, ಅಂಗವೈಕಲ್ಯ, ಯೋಜನಾ ನಿರಾಶ್ರಿತ, ತೃತೀಯ ಲಿಂಗಿ, ಮೀಸಲಾತಿ ಕೋರಬಹುದಾಗಿದೆ.
21 ನಾನು 2A ಪ್ರವರ್ಗಕ್ಕೆ ಸೇರಿದ್ದು, 1ನೇ ತರಗತಿಯಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ್ದೇನೆ. ನನ್ನ ತಂದೆಯವರು ಸರ್ಕಾರಿ ನೌಕರಿಯಲ್ಲಿ ಇದ್ದು, ವಾರ್ಷಿಕ ಆದಾಯ ರೂ.8.00 ಲಕ್ಷಕ್ಕಿಂತ ಹೆಚ್ಚಿರುತ್ತದೆ. ಸಾಮಾನ್ಯ (GM) ವರ್ಗದಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿ ಅನ್ವಯಿಸುತ್ತದೆಯೇ?
ಉತ್ತರ ಗ್ರಾಮೀಣ ಮೀಸಲಾತಿಗೆ ಕೆನೆಪದರ ನೀತಿ ಅನ್ವಯಿಸುವುದರಿಂದ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕೂ ಹೆಚ್ಚಿದ್ದಲ್ಲಿ ಗ್ರಾಮೀಣ ಮೀಸಲಾತಿಯನ್ನು ಕೋರಲು ಅವಕಾಶವಿರುವುದಿಲ್ಲ.
🎓 5. ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದಂತೆ
22 ನಾನು ಜಿ.ಪಿ.ಟಿ ಹುದ್ದೆಯ ಆಕಾಂಕ್ಷಿಯಾಗಿದ್ದು, ಪದವಿಯಲ್ಲಿ ಸರಾಸರಿ ಅಂಕಗಳನ್ನು ಗಳಿಸಿರಬೇಕೇ? ಅಥವಾ ಹುದ್ದೆಯ ವಿಷಯಕ್ಕೆ ನಿಗದಿಪಡಿಸಿದ ಸಮೂಹ ವಿಷಯಗಳಲ್ಲಿ ಶೇ.50 ರಷ್ಟು ಗಳಿಸಿರಬೇಕೇ?
ಉತ್ತರ ಪದವಿಯಲ್ಲಿ ಒಟ್ಟಾರೆಯಾಗಿ ಸರಾಸರಿ ಶೇ.50ರಷ್ಟು ಅಂಕಗಳನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು.
23 ನಾನು ಪ್ರಾಥಮಿಕ ಶಾಲಾ ಶಿಕ್ಷಕ (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (GPT) ಮತ್ತು ಪ್ರೌಢಶಾಲಾ ಸಹಶಿಕ್ಷಕ (AM) ಈ ಮೂರೂ ವೃಂದಗಳಿಗೆ ವಿದ್ಯಾರ್ಹತೆಯನ್ನು ಹೊಂದಿದ್ದೇನೆ. ನಾನು ಎಲ್ಲಾ ಮೂರೂ ವೃಂದಗಳಿಗೆ ಒಂದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕೇ?
ಉತ್ತರ ಪ್ರಾಥಮಿಕ ಶಾಲಾ ಶಿಕ್ಷಕ (PST), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ (GPT) ಮತ್ತು ಪ್ರೌಢಶಾಲಾ ಸಹಶಿಕ್ಷಕ (AM) ಈ ಮೂರೂ ವೃಂದಗಳಿಗೆ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಯು ತನ್ನ ಇಚ್ಛೆಯಂತೆ ಬೇರೆ ಬೇರೆ ವೃಂದಕ್ಕೆ ಬೇರೆ ಬೇರೆ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬಹುದು. ಆದರೆ ಒಂದು ವೃಂದಕ್ಕೆ ಒಂದು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕಿರುತ್ತದೆ.
24 GPT ಕನ್ನಡ ಭಾಷಾ ವಿಷಯದ ಹುದ್ದೆಗೆ ಪದವಿಯಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕವಾಗಿ ಮೂರೂ ವರ್ಷಗಳು ಅಧ್ಯಯನ ಮಾಡಿರಬೇಕೇ? ಅಥವಾ ಪದವಿಯಲ್ಲಿ ಭಾಷೆಯನ್ನಾಗಿ ಅಧ್ಯಯನ ಮಾಡಿದ್ದರೆ ಸಾಕಾಗುವುದಿಲ್ಲವೇ?
ಉತ್ತರ GPT ಕನ್ನಡ ಭಾಷಾ ವಿಷಯದ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಪದವಿಯಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕವಾಗಿ ಮೂರೂ ವರ್ಷಗಳು ಅಧ್ಯಯನ ಮಾಡಿರುವುದು ಕಡ್ಡಾಯವಾಗಿರುತ್ತದೆ.
25 ನನ್ನ ಪದವಿಯನ್ನು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿದ್ದು, ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಕೋರ್ ವಿಷಯಕ್ಕೆ ಅಂದರೆ ಕಲಾ/ಕನ್ನಡ (ಆಂಗ್ಲ ಮಾಧ್ಯಮ), ಜೀವವಿಜ್ಞಾನ (ಆಂಗ್ಲ ಮಾಧ್ಯಮ) ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ ಇಂಗ್ಲಿಷ್ ಭಾಷೆಯನ್ನು ಪದವಿಯಲ್ಲಿ ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಅಥವಾ SSLC ಯಲ್ಲಿ ಆಂಗ್ಲ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಅಥವಾ SSLC ಯನ್ನೇ ಅಥವಾ ಪದವಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡಿರಬೇಕು. ಅಥವಾ ಯು.ಜಿ.ಸಿ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಆ ಭಾಷೆಯ ಡಿಪ್ಲೊಮಾ ಅರ್ಹತೆ ಹೊಂದಿರತಕ್ಕದ್ದು.
26 ಪ್ರಾಥಮಿಕ ಶಾಲಾ PET-Grade-II (1 ರಿಂದ 8ನೇ ತರಗತಿ) ವೃಂದದ ಹುದ್ದೆಗೆ ಮತ್ತು ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ, PET-Grade-II, PET-Grade-I ಹುದ್ದೆಗೆ ಅರ್ಜಿ ಸಲ್ಲಿಸಲು TET/CTET ಅಗತ್ಯವೇ?
ಉತ್ತರ ಪ್ರಾಥಮಿಕ ಶಾಲಾ PET-Grade-II (1 ರಿಂದ 8ನೇ ತರಗತಿ) ವೃಂದದ ಹುದ್ದೆಗೆ ಮತ್ತು ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ, PET-Grade-I ಹುದ್ದೆಗೆ ಅರ್ಜಿ ಸಲ್ಲಿಸಲು TET/CTET ಯ ಅಗತ್ಯವಿರುವುದಿಲ್ಲ.
27 ಪ್ರಾಥಮಿಕ ಶಾಲಾ ಶಿಕ್ಷಕರ (1 ರಿಂದ 5ನೇ ತರಗತಿ) ವೃಂದದ ಹುದ್ದೆಗೆ ಅರ್ಜಿ ಸಲ್ಲಿಸಲು TET/CTET ಅಗತ್ಯವೇ?
ಉತ್ತರ TET/CTET ಪತ್ರಿಕೆ-1 ಕಡ್ಡಾಯವಾಗಿ ಪಡೆದಿರಬೇಕು. SC/ST/C-I/ PH ಅಭ್ಯರ್ಥಿಗಳು ಶೇ.55 ಅಂಕಗಳನ್ನು ಹಾಗೂ GM ಹಾಗೂ 2A, 2B, 3A, 3B ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಶೇ.60ರಷ್ಟು ಅಂಕಗಳನ್ನು ಗಳಿಸಿರಬೇಕು.
28 ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿ) ವೃಂದದ ಹುದ್ದೆಗೆ, PET-Grade-II, PET-Grade-I ಹುದ್ದೆಗೆ ಅರ್ಜಿ ಸಲ್ಲಿಸಲು TET/CTET ಅಗತ್ಯವೇ?
ಉತ್ತರ TET/CTET ಪತ್ರಿಕೆ-II ಕಡ್ಡಾಯವಾಗಿ ಪಡೆದಿರಬೇಕು. SC/ST/C-I/ PH ಅಭ್ಯರ್ಥಿಗಳು ಶೇ.55 ಅಂಕಗಳನ್ನು ಹಾಗೂ GM ಹಾಗೂ 2A, 2B, 3A, 3B ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಶೇ.60ರಷ್ಟು ಅಂಕಗಳನ್ನು ಗಳಿಸಿರಬೇಕು.
💼 6. ಸೇವಾ ನಿರತ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ
29 ನಾನು ಸೇವಾ ನಿರತ ಅಭ್ಯರ್ಥಿಯಾಗಿದ್ದು, NOC ಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕೇ?
ಉತ್ತರ ಸೇವಾನಿರತ ಅಭ್ಯರ್ಥಿಯು NOC ಯನ್ನು ಮೂಲದಾಖಲೆಗಳ ಪರಿಶೀಲನೆಗೆ ಆಯ್ಕೆಯಾದಲ್ಲಿ ಪರಿಶೀಲನಾ ವೇಳೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದು ಸಲ್ಲಿಸುವುದು ಕಡ್ಡಾಯ.
30 ನಾನು ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆಯೇ?
ಉತ್ತರ ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
31 ನಾನು ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆಯೇ?
ಉತ್ತರ ಶಾಲಾ ಶಿಕ್ಷಣ ಇಲಾಖೆಯಲ್ಲಿ GPT ಶಿಕ್ಷಕಿಯಾಗಿ/ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, 2026ನೇ ಸಾಲಿನಲ್ಲಿ ಮತ್ತೊಮ್ಮೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
32 ನಾನು ಅನುದಾನಿತ ಶಾಲೆಯಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯ ಹುದ್ದೆಗೆ ಅರ್ಜಿ ಸಲ್ಲಿಸಬಹುದಾ?
ಉತ್ತರ ಅನುದಾನಿತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿಯ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
33 ನಾನು ಇತರೆ ಇಲಾಖೆಯಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿದ್ದು, NOC ಪಡೆದು ಅರ್ಜಿ ಸಲ್ಲಿಸಬಹುದಾ?
ಉತ್ತರ ಈಗ NOC ಇಲ್ಲದೆಯೇ ಅರ್ಜಿ ಸಲ್ಲಿಸಬಹುದು, 1:2 ಮೂಲದಾಖಲೆಗಳ ಪರಿಶೀಲನೆಗೆ ಆಯ್ಕೆಯಾದಲ್ಲಿ ದಾಖಲೆಗಳ ಪರಿಶೀಲನಾ ವೇಳೆಯಲ್ಲಿ ನೇಮಕಾತಿ ಪ್ರಾಧಿಕಾರಕ್ಕೆ ಪರಿಶೀಲನೆಗೆ ಹಾಜರುಪಡಿಸಬೇಕಿರುತ್ತದೆ.
🏠 7. ಯೋಜನಾ ನಿರಾಶ್ರಿತ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ
34 ವಿವಾಹಿತ ಮಹಿಳೆಯಾಗಿದ್ದು, ತಂದೆಯ ಹೆಸರಿನಲ್ಲಿ ಪಡೆದ ಯೋಜನಾ ನಿರಾಶ್ರಿತ ಪ್ರಮಾಣ ಪತ್ರ ಸಲ್ಲಿಸಬಹುದೇ?
ಉತ್ತರ ಸಲ್ಲಿಸಬಹುದು, ನಮೂನೆಯಲ್ಲಿ ಅಭ್ಯರ್ಥಿಯ ಹೆಸರು ಸ್ಪಷ್ಟವಾಗಿ ನಮೂದಾಗಿರಬೇಕು.
⚠️ ವಿಶೇಷ ಸೂಚನೆ: ಸದರಿ ಪ್ರಶ್ನೋತ್ತರಗಳು, ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಸುತ್ತೋಲೆ, ಆದೇಶ, ಅಧಿಸೂಚನೆಗೆ ಒಳಪಟ್ಟಿರುತ್ತದೆ.
CRP Banner Card
📄
🖊️
ನಿಮ್ಮ ಪೇಜ್ ಶೀರ್ಷಿಕೆ
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive