ಮಾದರಿ ಪ್ರಥಮ ಸಂಕಲನಾತ್ಮಕ ಪರೀಕ್ಷೆ (SA-1) ಪ್ರಮುಖ ವೈಶಿಷ್ಟತೆಗಳು ಕೆಳಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿದ ನಂತರ ಪ್ರಶ್ನೆ ಪತ್ರಿಕೆ ರಚಿಸಿಕೊಳ್ಳಿ
ಮಾದರಿ ಪ್ರಥಮ ಸಂಕಲನಾತ್ಮಕ ಪರೀಕ್ಷೆ (SA-1)ಗಾಗಿ ಅಗತ್ಯವಿರುವ ಈ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ನಿಮ್ಮ ತರಗತಿಯ ಮಕ್ಕಳ ಕಲಿಕಾ ಮತ್ತು ಮಾನಸಿಕ ಮಟ್ಟಕ್ಕೆ ಅನುಗುಣವಾಗಿ ಬಳಸಿಕೊಳ್ಳಲು ಇಲ್ಲಿ ಲಭ್ಯವಾಗುವಂತೆ ರೂಪಿಸಲಾಗಿದೆ.
ಪ್ರಶ್ನೆ ಪತ್ರಿಕೆಯನ್ನು ತೆರೆದ ನಂತರ ಕೆಳಗಿರುವ ಆಯ್ಕೆಗಳನ್ನು ಗಮನಿಸಿ. ಪ್ರತಿಯೊಂದು ವೈಶಿಷ್ಟ್ಯವನ್ನು ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಬಳಸಿಕೊಳ್ಳಬಹುದು.
1 ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವಿಧಾನ
ಪ್ರಶ್ನೆ ಪತ್ರಿಕೆ ತೆರೆದ ನಂತರ ನಿಮ್ಮ ಶಾಲೆಯ ಹೆಸರನ್ನು ನೇರವಾಗಿ ಟೈಪ್ ಮಾಡಿಕೊಳ್ಳಬಹುದು.
ಪರೀಕ್ಷೆಯ ಅಂಕಗಳನ್ನು ಆಯ್ಕೆ ಮಾಡಿಕೊಳ್ಳಿ. ಪರೀಕ್ಷೆಯ ದಿನಾಂಕವನ್ನು ಕೂಡ ನಮೂದಿಸಬಹುದು. ದಿನಾಂಕ ಬೇಡವಾದರೆ Clear ಮಾಡಿ ಖಾಲಿಯಾಗಿ ಇಡಬಹುದು.
ಕೆಳಭಾಗದಲ್ಲಿರುವ Arrow ▶️ ಗುರುತಿನ ಮೇಲೆ ಕ್ಲಿಕ್ ಮಾಡಿದಾಗ ಆ Semesterನಲ್ಲಿರುವ ಎಲ್ಲಾ ಪಾಠಗಳು ಕಾಣಿಸುತ್ತವೆ. ಅಗತ್ಯವಿರುವ ಪಾಠಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಪ್ರತಿಯೊಂದು ಪ್ರಶ್ನೆಯ ಬಲಭಾಗದ ಕೊನೆಯಲ್ಲಿ ↩️ ಗುರುತು ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೆ ಆ ಪ್ರಶ್ನೆಯನ್ನು ಮತ್ತೊಂದು ಪ್ರಶ್ನೆಯಾಗಿ ಬದಲಾಯಿಸಬಹುದು.
ಸಂಪೂರ್ಣ ಪ್ರಶ್ನೆಯನ್ನು ಬದಲಾಯಿಸಬೇಕಾದರೆ ಮೇಲಿರುವ “ಸಂಪಾದಿಸಿ ಅಥವಾ ಟೈಪ್ ಮಾಡಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಅಗತ್ಯಕ್ಕೆ ತಕ್ಕಂತೆ ಯಾವುದೇ ಪ್ರಶ್ನೆಯನ್ನು ಟೈಪ್ ಮಾಡಬಹುದು.
2 ಪ್ರಶ್ನೆ ಪತ್ರಿಕೆಯ ವಿಶೇಷ ವೈಶಿಷ್ಟ್ಯಗಳು
“ಉತ್ತರ ಬರೆಯಿರಿ” ಚೆಕ್‌ಬಾಕ್ಸ್ ⏹️ ಆಯ್ಕೆ ಮಾಡಿದರೆ ಪ್ರಶ್ನೆ ಪತ್ರಿಕೆಯಲ್ಲಿಯೇ ಉತ್ತರ ಬರೆಯಲು ಅವಕಾಶ ದೊರೆಯುತ್ತದೆ.
ಅಗತ್ಯವಿದ್ದಲ್ಲಿ ಉತ್ತರ ಪತ್ರಿಕೆಯ ನೀಲಿ ನಕ್ಷೆಯನ್ನು ಕೂಡ ಚೆಕ್‌ಬಾಕ್ಸ್ ಮೂಲಕ ಆಯ್ಕೆ ಮಾಡಬಹುದು.
ಪ್ರತಿಯೊಂದು ಪ್ರಶ್ನೆಯನ್ನು ಪ್ರತ್ಯೇಕವಾಗಿ ಬದಲಾಯಿಸಿಕೊಳ್ಳುವ ಸೌಲಭ್ಯವಿದೆ.
ಪ್ರಶ್ನೆಗಳನ್ನು ನಿಮ್ಮ ತರಗತಿಯ ಮಕ್ಕಳ ಮಟ್ಟಕ್ಕೆ ಅನುಗುಣವಾಗಿ ಸಂಪಾದಿಸಬಹುದು.
Semesterನಲ್ಲಿರುವ ಪಾಠಗಳನ್ನು Arrow ▶️ ಮೂಲಕ ತೆರೆಯಿಸಿ ಆಯ್ಕೆ ಮಾಡಬಹುದು.
ಪ್ರಶ್ನೆ ಪತ್ರಿಕೆ ಪೂರ್ಣಗೊಂಡ ನಂತರ Print ಆಯ್ಕೆಯ ಮೂಲಕ ಮುದ್ರಿಸಬಹುದು.
ಶಾಲೆಯ ಹೆಸರು, ಅಂಕಗಳು, ದಿನಾಂಕ, ಪಾಠಗಳು, ಪ್ರಶ್ನೆಗಳು, ಉತ್ತರ ಬರೆಯುವ ಸ್ಥಳ ಮತ್ತು ಉತ್ತರ ಪತ್ರಿಕೆ ನೀಲಿ ನಕ್ಷೆ ಮುಂತಾದ ಅಗತ್ಯ ಆಯ್ಕೆಗಳನ್ನು ಪೂರ್ಣಗೊಳಿಸಿ. ಪ್ರಶ್ನೆ ಪತ್ರಿಕೆ ಸಿದ್ಧವಾದ ನಂತರ Print ಮೇಲೆ ಕ್ಲಿಕ್ ಮಾಡಿ ಮುದ್ರಿಸಿಕೊಳ್ಳಬಹುದು.
