🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ವಿಭಕ್ತಿ ಪ್ರತ್ಯಯ, ವಿಧಗಳು

ವಿಭಕ್ತಿ ಪ್ರತ್ಯಯಗಳು

ನಾಮ ಪದಗಳ ಮೂಲ ರೂಪಕ್ಕೆ ನಾಮ ಪ್ರಕೃತಿ ಎಂದು ಹೇಳುತ್ತೇವೆ. ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ. ಈ ರೀತಿ ನಾಮ ಪ್ರಕೃತಿಗಳ ಜೊತೆ ಸೇರುವ ಅಕ್ಷರಗಳಿಗೆ ಅಥವಾ ಕ್ರಿಯಾಪದದೊಂದಿಗೆ ನಾಮಪದಗಳ ಸಂಬಂಧವನ್ನು ತಿಳಿಸುವ ಪ್ರತ್ಯಯಗಳಿಗೆ "ವಿಭಕ್ತಿ ಪ್ರತ್ಯಯ" ಎಂದು ಹೆಸರು.

ಹೊಸಗನ್ನಡ ಮತ್ತು ಹಳಗನ್ನಡ ವಿಭಕ್ತಿ ಪ್ರತ್ಯಯಗಳ ಪಟ್ಟಿ

ಕ್ರಮ ಸಂಖ್ಯೆ ವಿಭಕ್ತಿಯ ಹೆಸರು ಹೊಸಗನ್ನಡ ಪ್ರತ್ಯಯ ಹಳಗನ್ನಡ ಪ್ರತ್ಯಯ ಕಾರಕಾರ್ಥಗಳು
1 ಪ್ರಥಮಾ ಮ್ ಕರ್ತೃ
2 ದ್ವಿತೀಯಾ ಅನ್ನು ಅಮ್ ಕರ್ಮ
3 ತೃತೀಯಾ ಇಂದ ಇಮ್ / ಇಂದಂ ಕರಣ
4 ಚತುರ್ಥೀ ಗೆ, ಇಗೆ, ಕೆ, ಕ್ಕೆ ಗೆ, ಕೆ, ಕ್ಕೆ ಸಂಪ್ರದಾನ
5 ಪಂಚಮಿ ದೆಸೆಯಿಂದ ಅತ್ತಣಿಂ ಅಪಾದಾನ
6 ಷಷ್ಠೀ ಸಂಬಂಧ
7 ಸಪ್ತಮೀ ಅಲ್ಲಿ ಒಳ್ ಅಧಿಕರಣ
8 ಸಂಬೋಧನಾ ಏ, ಆ, ಇರಾ - ಅಭಿಮುಖೀಕರಣ

ಹಳಗನ್ನಡ ವಿಭಕ್ತಿ ರೂಪಗಳ ಉದಾಹರಣೆ (ರಾಮ ಶಬ್ದ)

ಹಳಗನ್ನಡದಲ್ಲಿ ವಿಭಕ್ತಿ ಪ್ರತ್ಯಯಗಳು ಸೇರಿದಾಗ ಪದದ ರೂಪಗಳು ಹೀಗಿರುತ್ತವೆ:

  • ಪ್ರಥಮಾ: ರಾಮ + ಮ್ = ರಾಮಂ
  • ದ್ವಿತೀಯಾ: ರಾಮ + ಅಮ್ = ರಾಮನಂ
  • ತೃತೀಯಾ: ರಾಮ + ಇಂ = ರಾಮನಿಂ
  • ಚತುರ್ಥೀ: ರಾಮ + ಗೆ = ರಾಮಂಗೆ
  • ಪಂಚಮಿ: ರಾಮ + ಅತ್ತಣಿಂ = ರಾಮನತ್ತಣಿಂ
  • ಷಷ್ಠೀ: ರಾಮ + ಅ = ರಾಮನ
  • ಸಪ್ತಮೀ: ರಾಮ + ಒಳ್ = ರಾಮನೊಳ್
ಗಮನಿಸಿ: ಕನ್ನಡದಲ್ಲಿ ಪ್ರಮುಖವಾಗಿ 7 ವಿಭಕ್ತಿಗಳಿವೆ ಎಂದು ಪರಿಗಣಿಸಲಾಗುತ್ತದೆ. ಸಂಬೋಧನಾ ವಿಭಕ್ತಿಯನ್ನು ಕರೆಯಲು ಅಥವಾ ಸಂಬೋಧಿಸಲು ಬಳಸಲಾಗುತ್ತದೆ.
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive