🔴 LIVE NEWS
SCHOOLS RESOURCE CENTER —ಶೈಕ್ಷಣಿಕ ಸುದ್ದಿಗಳು
Loading...
📢 EDUCATIONAL NEWS
📚2026-27 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆಯ ಧ್ಯೇಯ ವಾಕ್ಯ "ಉತ್ತಮ ಕಲಿಕೆ ಉಜ್ವಲ ಭವಿಷ್ಯ".
📚 2026-27 ಶೈಕ್ಷಣಿಕ ವರ್ಷದ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ.
🍛ರಾಜ್ಯದ ಎಲ್ಲಾ ಶಾಲೆಗಳಿಗೆ ಅಕ್ಷರ ದಾಸೋಹಕ್ಕೆ ಅಗತ್ಯವಾದ ಗ್ಯಾಸ್ ಸಿಲಿಂಡರ್ ಪೂರೈಕೆ.
🏫 ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ನಿರಂತರ ಆಪ್ಲಿಕೇಶನ್ ಮೂಲಕ AI ಹಾಜರಾತಿ
🎓 ಜೂನ್ 25 ರ ಒಳಗೆ ಸೇತುಬಂಧ SATS-LBA ನಲ್ಲಿ ಗ್ರೇಡ್ಗಳನ್ನು ಎಂಟ್ರಿ ಮಾಡುವುದು ಕಡ್ಡಾಯ.
📝 ಎಲ್ಲಾ ಶಾಲೆಗಳಲ್ಲಿ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
💡 ಶಾಲಾ ಮಕ್ಕಳಿಗಾಗಿ ವಿಭಿನ್ನ ಅವಧಿಯ ಸೇತುಬಂಧ.
📖 ಸರ್ಕಾರಿ ನೌಕರರಿಗೆ KAAMS Check in Check outಕಡ್ಡಾಯ
🕊️
🕊️
Loading...
OPEN
ಕೆಲವೊಂದು ಪುಟಗಳಲ್ಲಿ ಫೈಲ್ಸ್ ಲೋಡ್ ಆಗಲು 5-6 ಸೆಕೆಂಡ್ ತೆಗೆದುಕೊಳ್ಳಬಹುದು ದಯವಿಟ್ಟು ನಿರೀಕ್ಷಿಸಿ...!

Saturday, May 23, 2026

ಸರ್ವನಾಮ

ಕನ್ನಡ ವ್ಯಾಕರಣ: ಸರ್ವನಾಮಗಳು ಮತ್ತು ಭಾವನಾಮಗಳು

ಸರ್ವನಾಮಗಳು (Pronouns)

ನಾಮಪದಕ್ಕೆ ಬದಲಾಗಿ ಬಳಸುವ ಪದಗಳನ್ನು ಸರ್ವನಾಮಗಳು ಎನ್ನುತ್ತಾರೆ. ಇದರಲ್ಲಿ 4 ಮುಖ್ಯ ವಿಧಗಳಿವೆ:

1. ಪುರುಷಾರ್ಥಕ ಸರ್ವನಾಮ

ಮಾತನಾಡುವವರು, ಕೇಳಿಸಿಕೊಳ್ಳುವವರು ಮತ್ತು ಯಾರ ಬಗ್ಗೆ ಮಾತನಾಡುತ್ತಿದ್ದೇವೆಯೋ ಅವರ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ವರ್ಗೀಕರಿಸಲಾಗಿದೆ:

ಪುರುಷ ಏಕವಚನ ಬಹುವಚನ
ಉತ್ತಮ ಪುರುಷ (ಮಾತನಾಡುವವರು) ನಾನು ನಾವು
ಮಧ್ಯಮ ಪುರುಷ (ಕೇಳುವವರು) ನೀನು ನೀವು
ಪ್ರಥಮ ಪುರುಷ (ಬೇರೆಯವರು) ಅವನು, ಅವಳು, ಅದು ಅವರು, ಅವು

2. ಆತ್ಮಾರ್ಥಕ ಸರ್ವನಾಮ

ತನ್ನನ್ನು ತಾನೇ ಸಂಬೋಧಿಸಿಕೊಳ್ಳುವಾಗ ಬಳಸುವ ಪದಗಳು.

ಉದಾಹರಣೆ: ತಾನು, ತಾವು.

3. ಪ್ರಶ್ನಾರ್ಥಕ ಸರ್ವನಾಮ

ಪ್ರಶ್ನಿಸುವ ಸಂದರ್ಭದಲ್ಲಿ ಬಳಸುವ ಸರ್ವನಾಮಗಳು.

ಉದಾಹರಣೆ: ಯಾವನು, ಯಾವುದು, ಏಕೆ, ಯಾರು?

4. ನಿರ್ದೇಶನಾತ್ಮಕ / ದರ್ಶಕ ಸರ್ವನಾಮ

ಒಂದು ವಸ್ತುವನ್ನು ಅಥವಾ ವ್ಯಕ್ತಿಯನ್ನು ಸ್ಪಷ್ಟವಾಗಿ ಮತ್ತು ನಿರ್ದಿಷ್ಟವಾಗಿ ನಿರ್ದೇಶಿಸಿ ತೋರಿಸುವುದು.

ತಾಜ್ ಮಹಲ್ ಕಲ್ಲಿನಲ್ಲಿ ಅರಳಿದ ಪ್ರೇಮ ಕಾವ್ಯ.

ಗೋಲಗುಮ್ಮಟ ಜಗತ್ಪ್ರಸಿದ್ಧ ಕಟ್ಟಡ.

ಭಾವನಾಮಗಳು (Abstract Nouns)

ವಸ್ತು ಅಥವಾ ವ್ಯಕ್ತಿಗಳ ಗುಣ, ಸ್ವಭಾವ, ಸ್ಥಿತಿ ಅಥವಾ ಕ್ರಿಯೆಗಳನ್ನು ತಿಳಿಸುವ ಪದಗಳನ್ನು ಭಾವನಾಮಗಳು ಎನ್ನುತ್ತಾರೆ.

ಇವು ಕಣ್ಣಿಗೆ ಕಾಣಿಸುವುದಿಲ್ಲ, ಕೇವಲ ಭಾವನೆಗೆ ನಿಲುಕುವವು:

  • ಸ್ಥಿತಿ: ಬಾಲ್ಯ, ಮುಪ್ಪು, ಬಡತನ
  • ಸ್ವಭಾವ/ಗುಣ: ಸಿಟ್ಟು, ಸಂತೋಷ, ಕೋಪ, ತಾಪ, ಒಳ್ಳೆಯತನ
  • ಕ್ರಿಯೆ: ಅಳು, ನಗು, ಓಟ, ಜಿಗಿತ
ಇತರ ಉದಾಹರಣೆಗಳು: ಬಿಳುಪು, ಕಪ್ಪು, ಹಿರಿದು, ಕಿರಿದು.
Choose Language / ಭಾಷೆ ಆಯ್ಕೆ ಮಾಡಿ
SCHOOL RESOURCE CENTER APP
Google Play
GET IT ON Google Play
INSTALL

Blog Archive